alex Certify
ಕನ್ನಡ ದುನಿಯಾ       Mobile App
       

Kannada Duniya

‘ಜನರ ಸಮಸ್ಯೆಗಿಂತ ವಾಚ್, ಕನ್ನಡಕವೇ ಆದ್ಯತೆ ವಿಷಯವಾಗಿದೆ’

eshwarappa

ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವ ಟಿ.ಬಿ. ಜಯಚಂದ್ರ ಸರಳ ವಿವಾಹ ಕಾಯ್ದೆ ಜಾರಿಗೆ ತರಲು ಹೊರಟಿದ್ದರು. ಈಗ ಮುಖ್ಯಮಂತ್ರಿ 70 ಲಕ್ಷ ರೂ. ಬೆಲೆಯ ವಾಚ್ ಕಟ್ಟುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿವೆ. ಇದೇನಾ ಸಮಾಜವಾದಿ ಕಲ್ಪನೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿಗಳು ವಾಚ್, ಕನ್ನಡಕದ ಬಗ್ಗೆ ವ್ಯಕ್ತಿಗತ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದರು.

ವೈಯಕ್ತಿಕ ದ್ವೇಷಕ್ಕಾಗಿ ಟೀಕೆ ಮಾಡಬಾರದು. ಆದರೆ, ಸಿಎಂ ವಾಚ್, ಕನ್ನಡಕದ ಬಗ್ಗೆ ಕುಮಾರಸ್ವಾಮಿ ಪ್ರಶ್ನಿಸಿದರೆ, ಅವರ ಪುತ್ರನ ಕಾರಿನ ಬಗ್ಗೆ ಸಿಎಂ ಕೇಳುತ್ತಾರೆ. ಹೀಗೆ ಕನ್ನಡಕ, ವಾಚ್, ಕಾರ್ ಬಗ್ಗೆ ಚರ್ಚಿಸಿ ರಾಜಕಾರಣಿಗಳಾದ ನಾವೇ ಬೆತ್ತಲಾಗುತ್ತಿದ್ದೇವೆ ಎಂದು ಹೇಳಿದರು. ಇಂತಹ ವಿಷಯಗಳನ್ನು ಚರ್ಚಿಸುವ ಬದಲು ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡಲಿ. ವೈಯಕ್ತಿಕ ನೆಲೆಗಟ್ಟಿನಲ್ಲಿ ಟೀಕಿಸಬಾರದು ಎಂದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...