alex Certify
ಕನ್ನಡ ದುನಿಯಾ       Mobile App
       

Kannada Duniya

ವೇತನ ಪರಿಷ್ಕರಣೆ -ಕಾಲ್ಪನಿಕ ವೇತನ: ಸಿಹಿ ಸುದ್ದಿ ನೀಡಿದ ಸಿ.ಎಂ.

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಹಾಗೂ ಕಾಲ್ಪನಿಕ ವೇತನ ವಿಚಾರ ಕುರಿತಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಧಾನಪರಿಷತ್ ನಲ್ಲಿ ಮಾತನಾಡಿದ್ದಾರೆ.

ವೇತನ ಪರಿಷ್ಕರಣೆ ಕುರಿತ ಗೊಂದಲಗಳಿಗೆ ತೆರೆ ಎಳೆದ ಸಿ.ಎಂ., ವೇತನ ಆಯೋಗ ನೀಡಿದ ವರದಿ, ಮಧ್ಯಂತರ ಶಿಫಾರಸನ್ನು ಸರ್ಕಾರ ಒಪ್ಪಿದೆ. ಅಂತಿಮ ವರದಿ ಸಲ್ಲಿಸಲು 6 ನೇ ವೇತನ ಆಯೋಗಕ್ಕೆ ಏಪ್ರಿಲ್ ವರೆಗೂ ಅವಕಾಶ ಇದೆ. ವರದಿಯನ್ನು ಸರ್ಕಾರ ಪರಿಗಣಿಸಲಿದೆ. ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.

ಮನೆ ಬಾಡಿಗೆ ಕುರಿತಾಗಿ ವ್ಯತ್ಯಾಸಗಳಿದ್ದರೆ, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಇನ್ನು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿರುವ ಕಾಲ್ಪನಿಕ ವೇತನ ಶಿಫಾರಸುಗಳನ್ನು ಸರ್ಕಾರ ಪರಿಗಣಿಸಲಿದೆ ಎಂದು ಸಿ.ಎಂ. ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...