alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆಯೇ ರಾಜಭವನದಲ್ಲಿ ಪ್ರಮಾಣ ವಚನ, ಸಿ.ಎಂ. ಯಾರು ಎನ್ನುವುದೇ ಸಸ್ಪೆನ್ಸ್

ಬೆಂಗಳೂರು: ನಾಳೆಯೇ ರಾಜಭವನದಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಾಳಿನ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧರಾಗಿರುವಂತೆ ರಾಜಭವನದಿಂದ ಡಿ.ಪಿ.ಎ.ಆರ್. ವಿಭಾಗಕ್ಕೆ ಮಾಹಿತಿ ರವಾನಿಸಲಾಗಿದೆ.

ಆದರೆ, ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನುವುದರ ಕುರಿತಾಗಿ ಮಾಹಿತಿ ನೀಡಿಲ್ಲ. ನಾಳೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಬಹುದಾಗಿದ್ದು, ಸಿದ್ಧರಾಗಿರಿ ಎಂದಷ್ಟೇ ಸೂಚಿಸಲಾಗಿದೆ.

ಪ್ರಮಾಣ ವಚನ ಸಮಾರಂಭ ಮತ್ತು ಯಾರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬುದರ ಕುರಿತಾಗಿ ಇನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಗಿಲ್ಲ. ಅವರು ರಾಜಭವನದ ಕರೆಯ ನಿರೀಕ್ಷೆಯಲ್ಲಿದ್ದಾರೆ.

ಒಟ್ಟಿನಲ್ಲಿ ನಾಳೆ ನೂತನ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕರಿಸುವುದು ಖಚಿತವಾಗಿದೆ. ರಾಜ್ಯಪಾಲರ ಕರೆಯ ನಿರೀಕ್ಷೆಯಲ್ಲಿ ಬಿ.ಜೆ.ಪಿ. ನಾಯಕರಿದ್ದಾರೆ.

ಜೆ.ಡಿ.ಎಸ್. –ಕಾಂಗ್ರೆಸ್ ನಾಯಕರು ಕೂಡ ರಾಜ್ಯಪಾಲರ ಕರೆಯ ನಿರೀಕ್ಷೆಯಲ್ಲಿದ್ದಾರೆ. ರಾಜ್ಯಪಾಲರು ಯಾರಿಗೆ ಆಹ್ವಾನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...