alex Certify
ಕನ್ನಡ ದುನಿಯಾ       Mobile App
       

Kannada Duniya

ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಿಡಿದ ಪಟಾಕಿ: ಬಟ್ಟೆ ಅಂಗಡಿ ಸಂಪೂರ್ಣ ಭಸ್ಮ

ಗದಗ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಸಿಡಿಸಿದ ಪಟಾಕಿ ಕಿಡಿ ಬಟ್ಟೆ ಅಂಗಡಿಗೆ ತಾಗಿ, ಬಟ್ಟೆ ಅಂಗಡಿ ಸಂಪೂರ್ಣ ಭಸ್ಮವಾಗಿರುವ ಘಟನೆ ಗದಗದಲ್ಲಿ ನಡೆದಿದೆ.

ಗದಗ ಪಟ್ಟಣದ ಜವಳಿ ಬಜಾರ್ ಬಳಿ ಈ ಅವಘಡ ಸಂಭವಿಸಿದ್ದು, ಲಾಲ್​ಚಂದ್ ಬಗಲೇಚಾ ಎಂಬುವವರಿಗೆ ಸೇರಿದ ಜಯಭಾರತ ಬಟ್ಟೆ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಲಕ್ಷಾಂತರ ಮೌಲ್ಯದ ಬಟ್ಟೆ, ಅಂಗಡಿಯಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿವೆ.

ಗಣೇಶ ಮೂರ್ತಿ ವಿಸರ್ಜನೆ ವೇಳೆ ಈ ಘಟನೆ ಸಂಭವಿಸಿದ್ದು, ಕಿಡಿಗೇಡಿಗಳು ಈ ದುಷ್ಕೃತ್ಯ ಮೆರೆದಿದ್ದಾರೆಯೇ ಅಥವಾ ಪಟಾಕಿ ಕಿಡಿ ಸಿಡಿದು ಆಕಸ್ಮಿಕವಾಗಿ ಘಟನೆ ಸಂಭವಿಸಿದೆಯೆ ಎಂಬುದು ನಿಖರವಾಗಿ ತಿಳಿದುಬಂದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...