alex Certify
ಕನ್ನಡ ದುನಿಯಾ       Mobile App
       

Kannada Duniya

85 ವರ್ಷದ ವೃದ್ಧೆಯನ್ನು ರಕ್ಷಿಸಿದ ಸಿವಿಲ್ ಡಿಫೆನ್ಸ್ ತಂಡ

ಭಾರೀ ಮಳೆ, ಭೀಕರ ಪ್ರವಾಹಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿ, ರಸ್ತೆಗಳೆಲ್ಲ ಬಾಯ್ತೆರೆದು ನಿಂತಿವೆ. ಎಲ್ಲೆಲ್ಲೂ ರಕ್ಷಣೆಗಾಗಿ ಹಾಹಾಕಾರ ಆರಂಭವಾಗಿದೆ. ಗುಡ್ಡ ಕುಸಿತ ಸಂಭವಿಸಿ ನಿರಾಶ್ರಿತವಾದ ಕುಟುಂಬವೊಂದು ಮನೆಯಲ್ಲಿ ಬಿಟ್ಟು ಬಂದಿದ್ದ 85 ವರ್ಷದ ವೃದ್ಧೆಯೊಬ್ಬರನ್ನು ಸಿವಿಲ್ ಡಿಫೆನ್ಸ್ ತಂಡ ರಕ್ಷಣೆ ಮಾಡಿದೆ.

ಭಾರೀ ಮಳೆಗೆ ಹೆಬ್ಬೆಟ್ಟಗಿರಿಯಲ್ಲಿ ಗುಡ್ಡ ಕುಸಿತವುಂಟಾಗಿದೆ. ಕುಟುಂಬಸ್ಥರು ಅನಿವಾರ್ಯವಾಗಿ ಮನೆ ತೊರೆಯುವ ಸ್ಥಿತಿ. ಈ ವೇಳೆ ಮನೆಯಲ್ಲಿದ್ದ ಅಜ್ಜಿ ಬರಲು ಸಾಧ್ಯವಾಗದ ಕಾರಣ ಕುಟುಂಬಸ್ಥರು ಅಜ್ಜಿಯನ್ನು ಬಿಟ್ಟೂ ಬರಲಾಗದೇ, ಹೊತ್ತೂ ತರಲಾಗದೇ ಸಂದಿಗ್ದ ಪರಿಸ್ಥಿತಿಯನ್ನೆದುರಿಸಿದ್ದು, ಕೊನೆಗೆ ಮನೆಯಲ್ಲೇ ಬಿಟ್ಟು ಬಂದಿದ್ದಾರೆ. ಈ ವೇಳೆ ಮೊಮ್ಮಗ ಪವನ್ ಅಜ್ಜಿಯ ಸ್ಥಿತಿ ಬಗ್ಗೆ ವಿವರಿಸಿ, ಅಜ್ಜಿಯನ್ನು ಬಿಟ್ಟು ಬಂದಿರುವ ವಿಚಾರವನ್ನು ಎಸ್ಪಿ ಅವರಿಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಸ್ಪಿಯವರು ರಕ್ಷಣಾ ಕಾರ್ಯ ನಡೆಸುತ್ತಿದ್ದ ಸಿವಿಲ್ ಡಿಫೆನ್ಸ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಮನೆಗೆ ತೆರಳಿದಾಗ ಅಜ್ಜಿ ಮಂಚದ ಮೇಲೆ ಮಲಗಿದ್ದಾರೆ. ಅಜ್ಜಿಯನ್ನು ಕಂಡ ರಕ್ಷಣಾ ಪಡೆ, ಅಜ್ಜಿಯನ್ನು 10 ಕಿ.ಮೀ. ದೂರ ಹೊತ್ತು ತಂದು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...