alex Certify
ಕನ್ನಡ ದುನಿಯಾ       Mobile App
       

Kannada Duniya

ಪಕ್ಕದ ಗ್ರಾಮಕ್ಕೂ ವ್ಯಾಪಿಸಿದ ಕಾಲರಾ…?

ಶಿವಮೊಗ್ಗ : ಭದ್ರಾವತಿ ತಾಲೂಕು ಮೈದೊಳಲು ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಲರಾ ಇದೀಗ ಪಕ್ಕದ ಮಂಗೋಟೆ ಗ್ರಾಮಕ್ಕೂ ವ್ಯಾಪಿಸಿದೆ.

ಗ್ರಾಮದ ಆರು ಜನ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಕಾಲರಾ ಸೋಂಕು ತಗುಲಿರಬಹುದೆಂದು ಹೇಳಲಾಗಿದೆ. ಕಲುಷಿತ ನೀರು ಸೇವನೆಯಿಂದ ಈ ಆರು ಮಂದಿ ಆರೋಗ್ಯದಲ್ಲಿ ವ್ಯತ್ಯಯವಾಗಿದೆ.

ಮಂಗೋಟೆ ಗ್ರಾಮದ ಶಾರದಮ್ಮ, ಪ್ರೇಮಾ, ಅಶ್ವಿನಿ, ಅನಿಲ್, ಅವಿನಾಶ್, ಮೀನಾಕ್ಷಮ್ಮ ವಾಂತಿ ಭೇದಿಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೈದೊಳಲು ಗ್ರಾಮದ ಮೂಲಕ ಮಂಗೋಟೆ ಗ್ರಾಮಕ್ಕೆ ನಾಲೆಯಲ್ಲಿ ಹರಿದು ಬಂದ ನೀರು ಸೇವಿಸಿದ್ದರಿಂದ ಆರು ಮಂದಿ ಅಸ್ವಸ್ಥಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಮಂಗೋಟೆ ಗ್ರಾಮಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ದೌಡಾಯಿಸಿದ್ದು, ಕಾದಾರಿಸಿದ ನೀರನ್ನು ಕುಡಿಯುವಂತೆ ಜನರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜಾಗೃತಿ ಮೂಡಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...