alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆಯ ಹೆಸರಿಗೆ ಕಳಂಕ ತರುವ ಕೃತ್ಯ !

Murder 3.0 mn

ಮಕ್ಕಳಿಗೆ ತಂದೆ- ತಾಯಿ ಎಂದರೆ ಪ್ರಾಣ. ಪೋಷಕರಿಗೂ ಅಷ್ಟೇ ಮಕ್ಕಳ ಬಗ್ಗೆ ಕಾಳಜಿ. ಮಮತೆ ಜಾಸ್ತಿ. ಮಕ್ಕಳ ಶಿಕ್ಷಣ, ಊಟ, ಆಟದ ಬಗ್ಗೆ ಇನ್ನಿಲ್ಲದ ಕಾಳಜಿ ತೋರುತ್ತಾರೆ. ಆದರೆ, ಇಲ್ಲೊಬ್ಬ ಕ್ರೂರ ತಂದೆ
ಮಾಡಿರುವ ಕೃತ್ಯವನ್ನು ನೋಡಿದರೆ ತಂದೆಯ ಹೆಸರಿಗೆ ಕಳಂಕ ತರುವಂತಿದೆ.

ಶಾಲೆಯ ಶುಲ್ಕ ಕಟ್ಟುವಂತೆ ಮಕ್ಕಳು ಪೀಡಿಸಿದ್ದರಿಂದ ಕೋಪಗೊಂಡ ದುರುಳನೊಬ್ಬ ಮಕ್ಕಳನ್ನೇ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕ್ರೂರಿ, ಮಕ್ಕಳನ್ನು ಕೊಂದು ಅವರ ಶವವನ್ನು ಚೀಲದಲ್ಲಿ ಹಾಕಿ ಚರಂಡಿಗೆ ಎಸೆದಿದ್ದಲ್ಲದೇ ತನಗೇನೂ ಗೊತ್ತಿಲ್ಲದಂತೆ ನಾಟಕವಾಡಿದ್ದಾನೆ. ಬೆಂಗಳೂರು ಭುವನೇಶ್ವರ ನಗರ ನಿವಾಸಿ ಶಿವಕುಮಾರ್ ಎಂಬಾತ ಮನೆಯಲ್ಲಿದ್ದ ಸಂದರ್ಭದಲ್ಲಿ 9 ವರ್ಷದ ಪುತ್ರ ಹಾಗೂ 3 ವರ್ಷದ ಪುತ್ರಿ ಶಾಲೆಯ ಶುಲ್ಕ ಕಟ್ಟಬೇಕೆಂದು ಹೇಳಿದ್ದಾರೆ.

ಇಷ್ಟಕ್ಕೆ ಕೋಪಗೊಂಡ ಶಿವಕುಮಾರ್ ಮಕ್ಕಳನ್ನೇ ಇರಿದು ಕೊಂದಿದ್ದಾನೆ. ಬಳಿಕ ಶವಗಳನ್ನು ಚೀಲದಲ್ಲಿ ಹಾಕಿ ಚರಂಡಿಗೆ ಎಸೆದಿದ್ದಾನೆ. ಬಳಿಕ ಮಲೆಮಹದೇಶ್ವರ ಬೆಟ್ಟಕ್ಕೆ ಹೋಗಿದ್ದು, ಅಲ್ಲಿ ಮಕ್ಕಳು ತಪ್ಪಿಸಿಕೊಂಡಿದ್ದಾರೆ ಎಂದು ಕಟ್ಟುಕತೆ ಕಟ್ಟಿದ್ದಾನೆ. ಈತನ ವರ್ತನೆಯಿಂದ ಅನುಮಾನಗೊಂಡ ಪತ್ನಿ ಪೊಲೀಸರಿಗೆ ಹೇಳುವುದಾಗಿ ತಿಳಿಸಿದ್ದು, ಆಗ ಈತನ ನಿಜಬಣ್ಣ ಬಯಲಾಗಿದೆ. ಕೆಪಿ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಜರುಗಿಸಿದ್ದಾರೆ. ಚರಂಡಿಯಲ್ಲಿ ಮಕ್ಕಳ ಶವ ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...