alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಯ ಕಾಂಪೌಂಡ್ ಮೇಲಿಂದ ಬಿದ್ದು ಮಗು ಸಾವು

boy

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರೋ ಸೇಂಟ್ ಥಾಮಸ್ ಸ್ಕೂಲ್ ನಲ್ಲಿ ಮೂರೂವರೆ ವರ್ಷದ ಪುಟಾಣಿ ಕಾಂಪೌಂಡ್ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ. ಸಾವನ್ನಪ್ಪಿದ ಬಾಲಕ ಹರ್ಷಿತ್ ಸ್ವಾಮಿ ಪ್ರಿ-ನರ್ಸರಿಯಲ್ಲಿ ಓದ್ತಾ ಇದ್ದ. ತಂದೆ-ತಾಯಿಗೆ ಇವನೊಬ್ಬನೇ ಮಗ, ಸ್ವಾಮಿ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಸೂಪರ್ ವೈಸರ್ ಆಗಿ ಕೆಲಸ ಮಾಡ್ತಿದ್ದಾರೆ.

ಸೋಮವಾರ ಮಧ್ಯಾಹ್ನ ಆಕಸ್ಮಿಕವಾಗಿ ಹರ್ಷಿತ್ ಕಾಂಪೌಂಡ್ ಗೋಡೆ ಮೇಲಿಂದ ಕೆಳಕ್ಕೆ ಬಿದ್ದಿದ್ದ, ಅವನನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಮಂಗಳವಾರ ಸಂಜೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಮಗುವಿನ ಸಾವಿನ ಹಿನ್ನೆಲೆಯಲ್ಲಿ ಶಾಲೆಗೆ ಮೂರು ದಿನಗಳ ರಜೆ ಘೋಷಿಸಲಾಗಿತ್ತು.

ಚಿಕ್ಕ ಚಿಕ್ಕ ಮಕ್ಕಳು ಶಾಲೆಯ ಬಾತ್ ರೂಮಿನ ಹಿಂದೆ ಆಟವಾಡ್ತಾ ಇದ್ರು, ಅವರಲ್ಲಿ ಕೆಲವರು ಗೋಡೆ ಏರಿದ್ರು. ಹೀಗೆ ಆಟವಾಡುವ ಭರದಲ್ಲಿ ಕೆಳಕ್ಕೆ ಬಿದ್ದ ಹರ್ಷಿತ್ ತಲೆಗೆ ಪೆಟ್ಟಾಗಿತ್ತು. ಈ ಘಟನೆ ಬಗ್ಗೆ ಹರ್ಷಿತ್ ಪೋಷಕರು ಇದುವರೆಗೂ ದೂರು ದಾಖಲಿಸಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...