alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಡಗಿನಲ್ಲಿ ಎರಡು ತಿಂಗಳ ಮಗು ರಕ್ಷಣೆ

ಕೊಡಗು: ಮಡಿಕೇರಿ ಸಮೀಪದ ಕುಗ್ರಾಮವೊಂದರಲ್ಲಿ ರಕ್ಷಣಾ ಪಡೆಗಳ ಮಹತ್ವದ ಕಾರ್ಯಾಚರಣೆಯಲ್ಲಿ ಎರಡು ತಿಂಗಳ ಮಗುವನ್ನು ರಕ್ಷಿಸಿದ್ದಾರೆ. ಕಳೆದ ಮೂರು ದಿನಗಳಿಂದ ಪುಟ್ಟ ಮಗುವನ್ನು ಹೊಂದಿದ್ದ ಕುಟುಂಬ ನಲುಗಿ ಹೋಗಿತ್ತು.

ಸುತ್ತಮುತ್ತಲು ಅಪಾರ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದುದರಿಂದ ಹೊರಬರಲಾಗದೆ ಚಡಪಡಿಸುತ್ತಿತ್ತೆನ್ನಲಾಗಿದೆ. ಇದರ ಮಾಹಿತಿ ಪಡೆದ ರಕ್ಷಣಾ ಪಡೆಗಳು ಅವರ ಮನೆ ಪತ್ತೆ ಹಚ್ಚಿ, ರೋಪ್ ಕಟ್ಟಿ ಇಡೀ ಕುಟುಂಬವನ್ನು ರಕ್ಷಿಸಿದ್ದಾರೆ.

ರಕ್ಷಣಾ ಪಡೆ ಸಿಬ್ಬಂದಿ, ಮಗುವನ್ನು ಹರಸಾಹಸ ಪಟ್ಟು ರೋಪ್ ಸಹಾಯದಿಂದ ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...