alex Certify
ಕನ್ನಡ ದುನಿಯಾ       Mobile App
       

Kannada Duniya

ಬಾವಿಗೆ ಬಿದ್ರೂ ನೀರಿಗೆ ಬೀಳದ ಗಟ್ಟಿ ಜೀವ

ಚಿಕ್ಕಮಗಳೂರು: ಕೌಟುಂಬಿಕ ಕಲಹದಿಂದ ಬೇಸತ್ತು ವೃದ್ಧೆಯೊಬ್ಬರು ಬಾವಿಗೆ ಹಾರಿದ್ದರೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕು ಹಾಲ್ಮತ್ತೂರು ಗ್ರಾಮದ 85 ವರ್ಷದ ವೃದ್ಧೆ ಕೌಟುಂಬಿಕ ಕಾರಣಗಳಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿದ್ದಾರೆ.

ಮಧ್ಯಾಹ್ನ ಮನೆಯ ಸಮೀಪದಲ್ಲೇ ಇದ್ದ ಬಾವಿಗೆ ಹಾರಿದ್ದಾರೆ. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಸ್ಥಳೀಯರಿಗೆ ಮಾಹಿತಿ ನೀಡಿದ್ದು, ವೃದ್ಧೆಯ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗಿದೆ.

ಸುಮಾರು 50 ಅಡಿಗೂ ಆಳದ ಬಾವಿಯಲ್ಲಿ 15 -20 ಅಡಿಗಳಷ್ಟು ನೀರಿದ್ದು, ವೃದ್ಧೆ ನೀರಿಗೆ ಬೀಳದೇ ನೀರೆತ್ತಲು ಅಳವಡಿಸಿದ್ದ ಪೈಪ್ ಗಳಲ್ಲಿ ಸಿಲುಕಿಕೊಂಡಿದ್ದಾರೆ.

ಸುಮಾರು 30 ಅಡಿ ಆಳದಲ್ಲಿ ಸಿಲುಕಿದ್ದ ವೃದ್ಧೆಯನ್ನು, ಸ್ಥಳೀಯರು ಸತತ ಪ್ರಯತ್ನದಿಂದ ರಕ್ಷಿಸಿದ್ದಾರೆ. ಹರಿಹರಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...