alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಯರ್ ಟಿನ್ ನಲ್ಲಿ ತಲೆ ಹಾಕಿದ ಹಾವು

ಚಿಕ್ಕಮಗಳೂರು: ಬಿಯರ್ ಟಿನ್ ನೊಳಗೆ ತಲೆ ಹಾಕಿ, ಒದ್ದಾಡುತ್ತಿದ್ದ ಹಾವನ್ನು ರಕ್ಷಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ದಂಟರಮಕ್ಕಿ ಉದಯನಗರ ಬಡಾವಣೆಯಲ್ಲಿರುವ ರಾಮೇಗೌಡರ ಜಾಗದಲ್ಲಿ ಹಾವು ಟಿನ್ ನೊಳಗೆ ತಲೆ ಹಾಕಿ ಒದ್ದಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಹಾವು ಹಿಡಿಯುವ ಸ್ನೇಕ್ ನರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಸ್ಥಳಕ್ಕೆ ಧಾವಿಸಿ ಬಂದ ನರೇಶ್, ಬಿಯರ್ ಟಿನ್ ಕತ್ತರಿಸಿ ಸ್ವಲ್ಪವೂ ಗಾಯವಾಗದಂತೆ ಹಾವನ್ನು ರಕ್ಷಿಸಿದ್ದಾರೆ.

ಟಿನ್ ನೊಳಗೆ ತಲೆ ಹಾಕಿದ ಹಾವಿಗೆ ಅದರಿಂದ ತಲೆಯನ್ನು ಹೊರ ತೆಗೆಯಲು ಸಾಧ್ಯವಾಗಿಲ್ಲ. ಇದರಿಂದಾಗಿ ಉಸಿರುಕಟ್ಟಿ ಒದ್ದಾಡಿದ್ದು, ಸುಸ್ತಾಗಿ ಮಲಗಿದೆ.

ಸ್ನೇಕ್ ನರೇಶ್ ಟಿನ್ ಕತ್ತರಿಸಿ ಬಳಿಕ, ಕಟ್ಟರ್ ನಿಂದ ಹಾವು ಸಿಲುಕಿದ್ದ ಭಾಗವನ್ನು ಕತ್ತರಿಸಿ ಸುರಕ್ಷಿತವಾಗಿ ಪಾರು ಮಾಡಿದ್ದಾರೆ. ಬಳಿಕ ಹಾವನ್ನು ಕಾಡಿನಲ್ಲಿ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...