alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರದ ದೃಶ್ಯ ಸೆರೆ ಹಿಡಿದು ಬ್ಲಾಕ್ ಮೇಲ್

ಚಿಕ್ಕಮಗಳೂರು: ಅತ್ಯಾಚಾರ ಎಸಗಿದ ದೃಶ್ಯಗಳನ್ನು ಬಹಿರಂಗಪಡಿಸುವುದಾಗಿ ಬೆದರಿಸಿ, ಮತ್ತೆ ಅತ್ಯಾಚಾರ ಎಸಗಿದ್ದ ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.

ಕೆಂಪನಹಳ್ಳಿಯ ಚಂದನ್, ಮನು, ದರ್ಶನ್ ರನ್ನು ಬಂಧಿಸಿ, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಇಬ್ಬರು ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದು, ಮೂವರು ಸಹಕಾರ ನೀಡಿದ್ದಾರೆ.

ಸೆಪ್ಟಂಬರ್ 6 ರಂದು ಚಿಕ್ಕಮಗಳೂರು ಕೆಂಪನಹಳ್ಳಿಯ ಬಾಲಕಿಯನ್ನು ಕರೆಸಿಕೊಂಡ ಚಂದನ್ ರತ್ನಗಿರಿ ಬಡಾವಣೆಯ ಪಾಳು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದು, ಬಳಿಕ ಮತ್ತೊಬ್ಬ ಅಪ್ರಾಪ್ತ ಕೂಡ ಅತ್ಯಾಚಾರ ಎಸಗಿದ್ದಾನೆ.

ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದ ಬಾಲಕಿ ಯಾರಿಗೂ ವಿಷಯ ತಿಳಿಸದೇ ಸುಮ್ಮನಾಗಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಅಪ್ರಾಪ್ತ, 2000 ರೂ. ಕೊಡುವಂತೆ ಬಾಲಕಿಗೆ ಪೀಡಿಸಿದ್ದು, ಹಣ ಕೊಡದಿದ್ದರೆ, ಅತ್ಯಾಚಾರದ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುವುದಾಗಿ ಬೆದರಿಸಿದ್ದಾನೆ.

ಬಾಲಕಿಯನ್ನು ಮತ್ತೆ ಕರೆದೊಯ್ದು ಅತ್ಯಾಚಾರ ಎಸಗಿ ದೃಶ್ಯಗಳನ್ನು ಸೆರೆ ಹಿಡಿದಿದ್ದಾನೆ. ಬಾಲಕಿ ನೀಡಿದ ಮಾಹಿತಿ ಮೇರೆಗೆ ಚಿಕ್ಕಮಗಳೂರು ಮಹಿಳಾ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬಸವನಹಳ್ಳಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...