alex Certify
ಕನ್ನಡ ದುನಿಯಾ       Mobile App
       

Kannada Duniya

ಗುಟ್ಕಾ ತರಿಸಿಕೊಂಡ ಕಾಮುಕನಿಂದ ನೀಚ ಕೃತ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಲಿಂಗದಹಳ್ಳಿಯ ಕಲ್ಲತ್ತಿಪುರದಲ್ಲಿ ಕಾಮುಕನೊಬ್ಬ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ತನ್ನ ಮನೆಯ ಸಮೀಪದಲ್ಲೇ ವಾಸವಾಗಿರುವ ಬಾಲಕಿಗೆ ಹಣಕೊಟ್ಟ 22 ವರ್ಷದ ಯುವಕ, ಗುಟ್ಕಾ ತರುವಂತೆ ಹೇಳಿದ್ದು, ಉಳಿದ ಚಿಲ್ಲರೆ ಹಣದಲ್ಲಿ ಸಿಹಿತಿಂಡಿ ತೆಗೆದುಕೊಂಡು ತಿನ್ನುವಂತೆ ತಿಳಿಸಿದ್ದಾನೆ.

ಆತ ಹೇಳಿದಂತೆ ಅಂಗಡಿಯಲ್ಲಿ ಸಿಹಿ ತಿಂಡಿ ಹಾಗೂ ಗುಟ್ಕಾ ತೆಗೆದುಕೊಂಡು ಬಾಲಕಿ ಮನೆಯೊಳಗೆ ಆಗಮಿಸಿದಾಗ, ಬಾಗಿಲು ಹಾಕಿದ ಕಾಮುಕ ಅತ್ಯಾಚಾರ ಎಸಗಿದ್ದಾನೆ. ಬಾಲಕಿಯ ಕಿರುಚಾಟ ಕೇಳಿ ಸ್ಥಳೀಯರು ರಕ್ಷಣೆಗೆ ಧಾವಿಸಿ ಬಂದಾಗ ಮನೆಯಿಂದ ಪರಾರಿಯಾಗಿದ್ದಾನೆ.

ಲಿಂಗದಹಳ್ಳಿ ಠಾಣೆ ಪೊಲೀಸರಿಗೆ ಬಾಲಕಿಯ ತಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...