alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಸಾವಿಗೆ ಕಾರಣವಾಯ್ತು ಮೊಬೈಲ್ ಚಾರ್ಜರ್

ಚಿಕ್ಕಮಗಳೂರು: ಮೊಬೈಲ್ ಚಾರ್ಜರ್ ಕೈಯಲ್ಲಿಡಿದು ಆಟವಾಡುತ್ತಿದ್ದ ಮಗು, ವಿದ್ಯುತ್ ಶಾಕ್ ನಿಂದ ಮೃತಪಟ್ಟ ದಾರುಣ ಘಟನೆ ಚಿಕ್ಕಮಗಳೂರು ಸಮೀಪದ ಆಲ್ದೂರಿನ ವಗರ್ ರಸ್ತೆಯಲ್ಲಿ ನಡೆದಿದೆ.

ಇಂದ್ರೇಶ್, ಲೀಲಾ ದಂಪತಿಯ ಪುತ್ರ ಅಭಿಜ್ಞಾನ್(4) ಮೃತಪಟ್ಟ ಮಗು. ಮನೆಯಲ್ಲಿ ತಾಯಿಯೊಂದಿಗೆ ಇದ್ದ ಅಭಿಜ್ಞಾನ್, ಮೊಬೈಲ್ ಚಾರ್ಜರ್ ಕೈಯಲ್ಲಿಡಿದುಕೊಂಡು ಆಟವಾಡುವಾಗ ಬಾಯಲ್ಲಿಟ್ಟುಕೊಂಡು ಕಚ್ಚಿದ್ದು, ವಿದ್ಯುತ್ ಪ್ರವಹಿಸಿದೆ.

ಇದರಿಂದಾಗಿ ವಿದ್ಯುತ್ ಆಘಾತಕ್ಕೆ ಒಳಗಾದ ಮಗುವನ್ನು ಆಲ್ದೂರು ಆಸ್ಪತ್ರೆಗೆ, ಅಲ್ಲಿಂದ ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಈ ವೇಳೆಗಾಗಲೇ ಮಗು ಮೃತಪಟ್ಟಿದೆ. ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗುವನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...