alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗನವಾಡಿಯಲ್ಲಿ ನಡೀತು ನಡೆಯಬಾರದ ಘಟನೆ

ಚಿಕ್ಕಮಗಳೂರು: ಅಂಗನವಾಡಿಯಲ್ಲಿ ವಿಷಜಂತು ಕಚ್ಚಿ ಮಗು ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಿಳಗುಳದಲ್ಲಿ ನಡೆದಿದೆ.

ಜಗದೀಶ್ –ಸವಿತಾ ದಂಪತಿಯ 5 ವರ್ಷದ ಪುತ್ರಿ ಧನ್ಯಶ್ರೀ ಮೃತಪಟ್ಟ ಮಗು. ಬಿಳಗುಳದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಧನ್ಯಶ್ರೀ ಮಕ್ಕಳೊಂದಿಗೆ ಗೋಡೆಯ ಬಳಿ ಕುಳಿತಿದ್ದ ಸಂದರ್ಭದಲ್ಲಿ ಗೋಡೆಯಲ್ಲಿದ್ದ ರಂಧ್ರದಿಂದ ಬಂದ ಹುಳುವೊಂದು ಕಚ್ಚಿದೆ.

ಅಂಗನವಾಡಿ ಶಿಕ್ಷಕಿ ಹೂವಮ್ಮ ಹುಳುವನ್ನು ದೂರ ಸರಿಸಿ ಧನ್ಯಶ್ರೀ ಕೈಗೆ ಅರಿಶಿನ ಪುಡಿ ಹಚ್ಚಿದ್ದಾರೆ. ಆದರೆ, ಧನ್ಯಶ್ರೀ ಅಸ್ವಸ್ಥವಾಗುತ್ತಿರುವುದನ್ನು ಗಮನಿಸಿದ ಅವರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ಮಾರ್ಗಮಧ್ಯದಲ್ಲೇ ಮಗು ಸಾವನ್ನಪ್ಪಿದೆ. ಶಿಥಿಲವಾದ ಅಂಗನವಾಡಿ ಕಟ್ಟಡದಲ್ಲಿ ರಂಧ್ರಗಳಾಗಿದ್ದು, ವಿಷಜಂತುಗಳು ಸೇರಿಕೊಂಡಿವೆ. ಮಕ್ಕಳಿಗೆ ಅಪಾಯ ಎದುರಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಮೃತಳ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...