alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕ್ಕಬಳ್ಳಾಪುರದಲ್ಲಿ ನಡೆದಿದೆ ಸಿನಿಮೀಯ ಘಟನೆ

ಚಿಕ್ಕಬಳ್ಳಾಪುರ: ಕಳ್ಳರಿಗೆ ಒಂದೆರಡು ಕ್ಷಣ ಟೈಂ ಸಿಕ್ಕರಷ್ಟೇ ಸಾಕು, ತಮ್ಮ ಕೈಚಳಕ ತೋರಿಸಿ ಮಾಲು ದೋಚಿ ಪರಾರಿಯಾಗುತ್ತಾರೆ. ಅಂತಹುದೇ ಘಟನೆಯೊಂದರ ವರದಿ ಇಲ್ಲಿದೆ.

ಕ್ಷಣಾರ್ಧದಲ್ಲಿ ಸ್ಕೂಟಿಯಲ್ಲಿದ್ದ ಹಣವನ್ನು ದೋಚಿದ ಖದೀಮರನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಪ್ರದೀಪ್ ಎಂಬುವವರು ಎಸ್.ಬಿ.ಐ. ಬ್ಯಾಂಕ್ ನಲ್ಲಿ 2.40 ಲಕ್ಷ ರೂ. ಡ್ರಾ ಮಾಡಿಕೊಂಡು ಸ್ಕೂಟಿಯಲ್ಲಿ ಮನೆಗೆ ಹೊರಟಿದ್ದಾರೆ. ಅವರನ್ನು 2 ಬೈಕ್ ಗಳಲ್ಲಿ ನಾಲ್ವರು ಹಿಂಬಾಲಿಸಿ ಅಡ್ಡ ಹಾಕಲು ಪ್ರಯತ್ನಿಸಿದ್ದು, ಪ್ರದೀಪ್ ಗೆ ಇದು ಗೊತ್ತಾಗದೇ ಹಾರೋಬಂಡಿ ಗ್ರಾಮ ಪಂಚಾಯಿತಿ ಎದುರು ಸ್ಕೂಟಿ ನಿಲ್ಲಿಸಿ ಒಳಗೆ ಹೋಗಿದ್ದಾರೆ.

ಅವರು ಕೆಲ ಸಮಯ ಹೋಗಿ ಬರುವಷ್ಟರಲ್ಲಿ ಸ್ಕೂಟಿಯಲ್ಲಿದ್ದ ಹಣ ದೋಚಿದ ಸತೀಶ್, ರಮಣ ಹಾಗೂ ಮತ್ತೊಬ್ಬ ಅಲ್ಲಿಂದ ಪರಾರಿಯಾಗಿದ್ದಾರೆ. ಇವರು ತಮ್ಮ ಸ್ಕೂಟಿ ಸಮೀಪದಿಂದ ತೆರಳಿದ್ದನ್ನು ಗಮನಿಸಿದ ಪ್ರದೀಪ್ ಜೋರಾಗಿ ಕೂಗಿದ್ದಾರೆ.

ಗ್ರಾಮಸ್ಥರು ಪ್ರದೀಪ್ ನೆರವಿಗೆ ಬಂದಿದ್ದು, ಕಳ್ಳರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಇಬ್ಬರು ಕೈಗೆ ಸಿಕ್ಕಿದ್ದು, ಅವರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...