alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕನ ಮಗಳ ಮದುವೆಯಾಗಿ ಮೊದಲರಾತ್ರಿಯೇ ದುಡುಕಿದ ಮದುಮಗ

ಚಿಕ್ಕಬಳ್ಳಾಪುರ: ಬಂಧು, ಬಾಂಧವರ ಸಮ್ಮುಖದಲ್ಲಿ ಅಕ್ಕನ ಮಗಳನ್ನು ಅದ್ಧೂರಿಯಾಗಿ ಮದುವೆಯಾಗಿದ್ದ ಮದುಮಗ ಮೊದಲರಾತ್ರಿಯೇ ದುಡುಕಿನ ನಿರ್ಧಾರ ಕೈಗೊಂಡ ಘಟನೆ ಚಿಕ್ಕಬಳ್ಳಾಪುರ ಸಮೀಪದ ಸೂಲಕುಂಟೆಯಲ್ಲಿ ನಡೆದಿದೆ.

ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಸ್ವಂತ ಅಕ್ಕನ ಮಗಳನ್ನು ನಿನ್ನೆ ಮದುವೆಯಾಗಿದ್ದು, ಬಂಧು ಬಳಗದವರೆಲ್ಲಾ ಆಗಮಿಸಿ ನವಜೋಡಿಗೆ ಶುಭ ಹಾರೈಸಿದ್ದಾರೆ. ಮೊದಲ ರಾತ್ರಿಯೇ ದುಡುಕಿನ ನಿರ್ಧಾರ ಕೈಗೊಂಡ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ ಡೆತ್ ನೋಟ್ ಬರೆದಿಟ್ಟಿದ್ದು, ತಮಗೆ ವೈವಾಹಿಕ ಜೀವನ ಇಷ್ಟವಿರಲಿಲ್ಲ. ಅಕ್ಕ ಮತ್ತು ಸಹೋದರನ ಬಲವಂತದಿಂದ ಮದುವೆಯಾಗಿದ್ದೇನೆ. ಪತ್ನಿಯನ್ನು ಸಹೋದರನಿಗೆ ಕೊಟ್ಟು ಮದುವೆ ಮಾಡಿ. ನನ್ನ ಸಾವಿಗೆ ನಾನೇ ಕಾರಣ ಎಂದು ತಿಳಿಸಿದ್ದಾರೆನ್ನಲಾಗಿದೆ.

ಮದುಮಗನ ಆತ್ಮಹತ್ಯೆಯಿಂದಾಗಿ ಕುಟುಂಬದವರು, ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...