alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಡೂಟ ಸೇವಿಸಲು ಹೋಗಿ ದುರಂತ

ಚಿಕ್ಕಬಳ್ಳಾಪುರ: ಬಾಡೂಟ ಸೇವಿಸಲು ತೆರಳಿದ್ದ ಯುವಕನೊಬ್ಬ ನೀರು ಪಾಲಾದ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕನ್ನಂಪಲ್ಲಿಯಲ್ಲಿ ನಡೆದಿದೆ.

ಕೆರೆ ತುಂಬಿದ ಹಿನ್ನಲೆಯಲ್ಲಿ ಶಾಸಕರು ಕೆರೆ ದಂಡೆಯಲ್ಲಿ ಬಾಡೂಟ ಏರ್ಪಡಿಸಿದ್ದಾರೆ. ಸುಮಾರು 20 ಸಾವಿರಕ್ಕೂ ಅಧಿಕ ಜನ ಬಾಡೂಟ ಸೇವಿಸಿದ್ದಾರೆ.

ಈ ವೇಳೆ ನೂಕುನುಗ್ಗಲು ಉಂಟಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಬಾಡೂಟ ಸೇವಿಸಲು ಹೋಗಿದ್ದ ಸುನಿಲ್ ಎಂಬ ಯುವಕ ಕೆರೆಗೆ ಇಳಿದ ಸಂದರ್ಭದಲ್ಲಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ.

ಆತನನ್ನು ರಕ್ಷಿಸಲು ಹೋದ ಜಯಸಿಂಹ ಎಂಬ ಯುವಕನೂ ನೀರಿನ ಸೆಳೆತಕ್ಕೆ ಸಿಲುಕಿದ್ದಾನೆ. ಅಲ್ಲಿದ್ದವರು ಜಯಸಿಂಹನನ್ನು ರಕ್ಷಿಸಿದ್ದಾರೆ. ಸುನಿಲ್ ನೀರು ಪಾಲಾಗಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹುಡುಕಾಟ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...