alex Certify
ಕನ್ನಡ ದುನಿಯಾ       Mobile App
       

Kannada Duniya

ಜೆಡಿಎಸ್ ಕಾರ್ಯಕರ್ತನಿಂದ ಅಮಾನುಷ ಕೃತ್ಯ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಅರ್ಕುಂದ ಗ್ರಾಮದಲ್ಲಿ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಕಾರ್ಯಕರ್ತರ ನಡುವೆ ಜಗಳವಾಗಿದೆ.

ಕಾಂಗ್ರೆಸ್ ಕಾರ್ಯಕರ್ತನ ಕೈ ಕತ್ತರಿಸಿ ಜೆ.ಡಿ.ಎಸ್. ಕಾರ್ಯಕರ್ತ ಅಮಾನುಷ ವರ್ತನೆ ತೋರಿದ್ದಾನೆ. ಜೆ.ಡಿ.ಎಸ್. ಕಾರ್ಯಕರ್ತ ಲೋಕೇಶ್ ಇಂತಹ ಕೃತ್ಯವೆಸಗಿದ ಆರೋಪಿ.

ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ ಅವರ ಕೈ ಕಟ್ ಆಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಶಾಸಕ ಸುಧಾಕರ್ ಅವರ ಪರವಾಗಿ ರವಿಕುಮಾರ್ ಸೀರೆ ಹಂಚುತ್ತಿದ್ದ ಸಂದರ್ಭದಲ್ಲಿ ಲೋಕೇಶ್ ನಡುವೆ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿದೆ. ಇದರಿಂದ ಆಕ್ರೋಶಗೊಂಡ ಲೋಕೇಶ್ ಮಾರಕಾಸ್ತ್ರದಿಂದ ರವಿಕುಮಾರ್ ಕೈ ಕತ್ತರಿಸಿದ್ದಾನೆ. ಮಂಚೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...