alex Certify
ಕನ್ನಡ ದುನಿಯಾ       Mobile App
       

Kannada Duniya

ಡಂಪ್ ಮಾಡಿದ ಮರಳಲ್ಲಿತ್ತು ಮೃತದೇಹ

m-sand-ddd

ಚಿಕ್ಕಬಳ್ಳಾಪುರ: ಟಿಪ್ಪರ್ ಲಾರಿಯಿಂದ ಎಂ ಸ್ಯಾಂಡ್ ಡಂಪ್ ಮಾಡಿದ ಸಂದರ್ಭದಲ್ಲಿ ಮೃತದೇಹ ಕಂಡು ಬಂದ ಘಟನೆ ಚಿಕ್ಕಬಳ್ಳಾಪುರದ ನಂದಿ ಕ್ರಾಸ್ ಬಳಿ ನಡೆದಿದೆ.

ದೇವನಹಳ್ಳಿ ತಾಲ್ಲೂಕಿನ ಮುದ್ದನಾಯಕನಹಳ್ಳಿಯ ಕ್ರಷರ್ ಒಂದರಿಂದ ಕಾಮಗಾರಿ ಸ್ಥಳಕ್ಕೆ ಟಿಪ್ಪರ್ ನಲ್ಲಿ ಎಂ ಸ್ಯಾಂಡ್ ತರಲಾಗಿದೆ.

ಕಾಮಗಾರಿ ಸ್ಥಳದಲ್ಲಿ ಎಂ ಸ್ಯಾಂಡ್ ಡಂಪ್ ಮಾಡಿದಾಗ, ಅದರಲ್ಲಿ ವ್ಯಕ್ತಿಯೊಬ್ಬನ ಶವ ಕಂಡು ಬಂದಿದೆ. ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿದಾಗ, ಮೃತ ವ್ಯಕ್ತಿಯ ಜೇಬಲ್ಲಿ ಡೆತ್ ನೋಟ್ ಕಂಡು ಬಂದಿದೆ. ಅದರಲ್ಲಿ ಆತನ ಹೆಸರು ಮತ್ತು ಸಾವಿಗೆ ಕಾರಣರಾದವರ ಹೆಸರನ್ನು ಬರೆಯಲಾಗಿದೆ.

ಆದರೆ, ವಿಳಾಸ ಇಲ್ಲದ ಕಾರಣ, ಪೊಲೀಸರು  ಮೃತನ ಮುಂದಿನ ಗುರುತು ಪತ್ತೆಗೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...