alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ಗಾಗಿ ಮತ್ತಿನಲ್ಲಿದ್ದ ಕಂಡಕ್ಟರ್ ಮಾಡಿದ್ದೇನು ಗೊತ್ತಾ…?

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆ ಪೆರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದ ಕಂಡಕ್ಟರ್ ಒಬ್ಬರು, ಕಾಂಡೋಮ್ ಕೊಡುವಂತೆ ಶುಶ್ರೂಷಕಿಯೊಂದಿಗೆ ರಂಪಾಟ ಮಾಡಿದ ಆರೋಪ ಕೇಳಿ ಬಂದಿದೆ.

ಮದ್ಯದ ಅಮಲಿನಲ್ಲಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಕಂಡಕ್ಟರ್ ಆಸ್ಪತ್ರೆಗೆ ಆಗಮಿಸಿ, ಕಾಂಡೋಮ್ ಕೊಡುವಂತೆ ಶುಶ್ರೂಷಕಿ ಬಳಿ ಕೇಳಿದ್ದು, ಕಾಂಡೋಮ್ ಬಾಕ್ಸ್ ನಲ್ಲಿ ತೆಗೆದುಕೊಳ್ಳುವಂತೆ ಶುಶ್ರೂಷಕಿ ತಿಳಿಸಿದ್ದಾರೆ. ಇಷ್ಟೇ ವಿಚಾರಕ್ಕೆ ಕಂಡಕ್ಟರ್ ಜಗಳವಾಡಿದ್ದಾರೆ.

ಶುಶ್ರೂಷಕಿ ತಮ್ಮ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಆಸ್ಪತ್ರೆಗೆ ಧಾವಿಸಿ ಬಂದ ಪತಿರಾಯ ಕಂಡಕ್ಟರ್ ನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಕಂಡಕ್ಟರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ರಾಜೀ ಪಂಚಾಯಿತಿ ನಡೆಸಿ ಪರಿಸ್ಥಿತಿ ತಿಳಿಗೊಳಿಸಲಾಗಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...