alex Certify
ಕನ್ನಡ ದುನಿಯಾ       Mobile App
       

Kannada Duniya

ವಾಸ್ತು ಪ್ರಕಾರ ಬದಲಾಯ್ತು ಸಿಎಂ ಕುರ್ಚಿ ದಿಕ್ಕು

ನೂತನ ಸಿಎಂ ಆಗಿ ಯಡಿಯೂರಪ್ಪ ಅಧಿಕಾರ ವಹಿಸಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ್ರು. ಬಹುಮತ ಸಾಬೀತುಪಡಿಸಲು 15 ದಿನಗಳ ಅವಕಾಶವಿದ್ದು, ಬಹುಮತ ಸಾಬೀತಾದ ಮೇಲೆ ಸಚಿವ ಸಂಪುಟ ಸೇರುವವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಪ್ರಮಾಣ ವಚನ ಸ್ವೀಕರಿಸಿದ ನಂತ್ರ ವಿಧಾನಸೌಧಕ್ಕೆ ತೆರಳಿದ ಸಿಎಂ ಯಡಿಯೂರಪ್ಪ ಸಿಎಂ ಕಚೇರಿಗೆ ಪ್ರವೇಶ ಮಾಡಿದ್ರು. ಸಚಿವ ಸಂಪುಟ ಸಭೆ ನಡೆಸಿ, ಸುದ್ದಿಗೋಷ್ಠಿ ನಡೆಸಿ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ಸಿಎಂ ಯಡಿಯೂರಪ್ಪ, ವಾಸ್ತು ಪ್ರಕಾರ ಸಿಎಂ ಕಚೇರಿಯಲ್ಲಿ ಕೆಲ ಬದಲಾವಣೆ ಮಾಡಿದ್ದಾರೆ.

ಈ ಹಿಂದಿನ ಸಿಎಂ ಸಿದ್ಧರಾಮಯ್ಯ ಪೂರ್ವಕ್ಕೆ ಕಚೇರಿ ಬಾಗಿಲು ತೆರೆದಿದ್ದರು. ಸದ್ಯ ಯಡಿಯೂರಪ್ಪ ಪಶ್ಚಿಮದ ಬಾಗಿಲನ್ನು ಮುಚ್ಚಿಸಿದ್ದಾರೆ. ಪೂರ್ವಕ್ಕಿದ್ದ ಸಿದ್ದರಾಮಯ್ಯ ಕುರ್ಚಿಯನ್ನೂ ಬದಲಿಸಿದ್ದಾರೆ. ಸಿದ್ಧರಾಮಯ್ಯ ಉತ್ತರಕ್ಕೆ ಕುಳಿತು ದಕ್ಷಿಣಕ್ಕೆ ಮುಖ ಮಾಡ್ತಿದ್ದರು. ಆದ್ರೆ ಯಡಿಯೂರಪ್ಪ ಪೂರ್ವಕ್ಕೆ ಮುಖ ಮಾಡಿ ಕುಳಿತುಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...