alex Certify
ಕನ್ನಡ ದುನಿಯಾ       Mobile App
       

Kannada Duniya

ಸಖತ್ ಇಂಟ್ರೆಸ್ಟಿಂಗ್ ಆಗಿದೆ ಈ ನಾಟಿ ಕೋಳಿ ಸ್ಟೋರಿ

ಬೆಂಗಳೂರು: ಗ್ರಾಮಾಂತರ ಪ್ರದೇಶಗಳಲ್ಲಿ ಕೋಳಿ ವಿಚಾರವಾಗಿ ಜಗಳ ನಡೆಯುವುದು ಸಾಮಾನ್ಯ. ಬೆಂಗಳೂರು ಮಹಾನಗರದಲ್ಲಿ ಕೋಳಿ ಕಳವಿನ ಕುರಿತಾದ ಪ್ರಕರಣವೊಂದು ನಡೆದಿದ್ದು, ಆಯುಕ್ತರ ಕಚೇರಿಗೆ ದೂರು ನೀಡಲಾಗಿದೆ.

ಬೈಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಿರಿಜಮ್ಮ ಅವರು ಸಾಕಿದ್ದ 35 ನಾಟಿ ಕೋಳಿಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಇದರಿಂದ ಕಂಗಾಲಾದ ಗಿರಿಜಮ್ಮ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೂರು ಪಡೆದುಕೊಂಡಿಲ್ಲ ಎನ್ನಲಾಗಿದೆ.

ಗಿರಿಜಮ್ಮ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ, ಹೆಚ್ಚುವರಿ ಆಯುಕ್ತರಿಗೆ ಕೋಳಿ ಕಳುವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹೆಚ್ಚುವರಿ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಬೈಯಪ್ಪನಹಳ್ಳಿ ಠಾಣೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ನಾಟಿ ಕೋಳಿಗೆ ಹೆಚ್ಚಿನ ದರ ಇದ್ದು, 35 ಕೋಳಿಗಳಿಗೆ ಸುಮಾರು 15,000 ರೂ. ಬೆಲೆ ಇದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...