alex Certify
ಕನ್ನಡ ದುನಿಯಾ       Mobile App
       

Kannada Duniya

ಚೆಕ್ ಮೂಲಕ ಬಂದ ಅಮೌಂಟ್ ನೋಡಿದ್ರೇ ಬಿದ್ದು ಬಿದ್ದು ನಗ್ತೀರಿ !

hsbc_global_locations

ಸಾಮಾನ್ಯವಾಗಿ ವ್ಯವಹಾರಗಳು ನಗದು ಮೂಲಕವೇ ನಡೆಯುತ್ತವೆ. ಚೆಕ್ ಮೂಲಕವೂ ಹೆಚ್ಚಿನ ಮೊತ್ತದ ವ್ಯವಹಾರ ನಡೆಯುತ್ತದೆ. ಆದರೆ, ಚೆಕ್ ಬಳಸುವ ವ್ಯವಹಾರ ಹೆಚ್ಚಾಗಿ ದೊಡ್ಡ ಮೊತ್ತದ್ದಾಗಿರುತ್ತದೆ. ಇಲ್ಲಿ ಚೆಕ್ ಮೂಲಕ ಬಂದಿರುವ ಮೊತ್ತವನ್ನು ನೋಡಿದ್ರೇ ಗ್ಯಾರಂಟಿ ಬಿದ್ದು, ಬಿದ್ದು ನಗ್ತೀರಿ.

ಮೈಸೂರಿನ ಪತ್ರಕರ್ತರೊಬ್ಬರಿಗೆ ಚೆಕ್ ಮೂಲಕ ಬಂದಿರುವ ಅಮೌಂಟ್ ನೋಡಿದ್ರೇ ನೀವು ನಗಲೇಬೇಕು ಕಾರಣ ಗೊತ್ತಾ? ಅವರಿಗೆ ಚೆಕ್ ನಲ್ಲಿ ಬಂದ ಅಮೌಂಟ್ ಕೇವಲ ಒಂದೇ ಒಂದು ಪೈಸೆ. ಇದೀಗ ಈ ಚೆಕ್ ಅವರನ್ನು ಚಿಂತೆಗೆ ಈಡುಮಾಡಿದೆ. ಮತ್ತೊಂದು ಸಂಗತಿಯೆಂದರೆ ಒಂದೇ ಒಂದು ಪೈಸೆಯ ಚೆಕ್ ಕಳುಹಿಸಲು 30 ರೂಪಾಯಿ ಕೊರಿಯರ್ ವೆಚ್ಛ ಮಾಡಲಾಗಿದೆ. ಮೈಸೂರಿನ ಪತ್ರಕರ್ತರೊಬ್ಬರು ದಿ ಹಾಂಕಾಂಗ್ ಅಂಡ್ ಶ್ಯಾಂಗೈ ಬ್ಯಾಂಕಿಂಗ್ ಕಾರ್ಪೋರೇಷನ್ ನಿಂದ ಕ್ರೆಡಿಟ್ ಕಾರ್ಡ್ ಪಡೆದಿದ್ದರು.

ಕೆಲ ದಿನಗಳ ಹಿಂದೆ ಅದರ ಬಳಕೆಯನ್ನು ನಿಲ್ಲಿಸಿದ್ದ ಕಾರಣ ಖಾತೆ ಸ್ಥಗಿತಗೊಳಿಸಿ, ಕ್ರೆಡಿಟ್ ಕಾರ್ಡ್ ವಾಪಸ್ ಮಾಡಿದ್ದರು. ಖಾತೆ ಸ್ಥಗಿತಗೊಂಡಿದ್ದರಿಂದ ಬ್ಯಾಂಕ್ ನಿಂದ ಅವರ ಲೆಕ್ಕಾಚಾರ ಪೂರ್ಣಗೊಳಿಸಿದ್ದು, ಉಳಿದ ಒಂದು ಪೈಸೆಯನ್ನು ಚೆಕ್ ಮೂಲಕ ಕಳುಹಿಸಲಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...