alex Certify
ಕನ್ನಡ ದುನಿಯಾ       Mobile App
       

Kannada Duniya

ಜನರಲ್ಲಿ ಆತಂಕ ಮೂಡಿಸಿದ್ದ ಪುಂಡ ಚಿರತೆ ಸೆರೆ

cheeta

ಬೆಂಗಳೂರಿನ ವಿಬ್ ಗಯಾರ್ ಶಾಲೆಯಲ್ಲಿ ಚಿರತೆ ಕಾಣಿಸಿಕೊಂಡು ಅವಾಂತರ ಸೃಷ್ಟಿಸಿದ ಘಟನೆ ಇನ್ನೂ ಮಾಸುವ ಮೊದಲೇ ತುಮಕೂರಿನಲ್ಲಿ ಚಿರತೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಠಿಸಿತ್ತು. ಅದನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತುಮಕೂರಿನ ಹನುಮಂತನಗರ ಬಡಾವಣೆಯಲ್ಲಿ ಏಕಾಏಕಿ ಚಿರತೆ ಕಾಣಿಸಿಕೊಂಡಿದೆ. ಚಿರತೆ ಕಂಡ ಜನ ಕೂಗಾಡಿದ್ದು, ಜನರ ಆರ್ಭಟಕ್ಕೆ ಅಂಜಿದ ಚಿರತೆ ಓಡುತ್ತಾ ಗಂಗಣ್ಣ ಎಂಬುವವರ ಕಾಂಪೌಂಡ್ ಸೇರಿಕೊಂಡಿದೆ. ಅಲ್ಲೇ ಸ್ವಲ್ಪ ಸಮಯ ಕಳೆದ ಚಿರತೆ ಬಳಿಕ ಪರಾರಿಯಾಗಿದೆ. ಸಾರ್ವಜನಿಕರು ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಕೆಲವೇ ಹೊತ್ತಿನಲ್ಲಿ ಚಿರತೆ ಸೆರೆಗೆ ಕಾರ್ಯಾಚರಣೆ ಆರಂಭಿಸಲಾಯಿತು.

ಹನುಮಂತನಗರದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿದ್ದ ಚಿರತೆ ಸಮೀಪದ ತೋಟಗಳಿಗೆ ನುಗ್ಗಿದೆ. ಬಳಿಕ ಅದಕ್ಕೆ ಅರವಳಿಕೆ ಚುಚ್ಚುಮದ್ದು ನೀಡಿ, ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಚಿರತೆ ಸೆರೆಹಿಡಿಯುವ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪುಗೂಡಿದ್ದರು. ಒಂದೆರಡು ಬಾರಿ ಜನರ ಕಡೆಗೂ ಚಿರತೆ ನುಗ್ಗಿದ್ದರಿಂದ ಕಾರ್ಯಾಚರಣೆಗೆ ತೊಂದರೆಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...