alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿನ ಚಂದ್ರ ಗ್ರಹಣದ ವಿಶೇಷತೆಯೇನು ಗೊತ್ತಾ…?

ಶತಮಾನದ ಅತಿ ದೀರ್ಫ ಚಂದ್ರ ಗ್ರಹಣಕ್ಕೆ ಮನುಕುಲ ಸಾಕ್ಷಿಯಾಗಲಿದೆ. ಭಾರತದಲ್ಲಿ ಶುಕ್ರವಾರ(ಇಂದು) ಮಧ್ಯರಾತ್ರಿ 11.54 ರಿಂದ ಗ್ರಹಣ ಹಿಡಿಯಲಿದ್ದು, ಸುಮಾರು 1.45 ಗಂಟೆಗಳ ಕಾಲ ಗ್ರಹಣ ಇರಲಿದೆ.

ಶುಕ್ರವಾರ ಸಂಭವಿಸಲಿರುವ ಗ್ರಹಣದ ಮತ್ತೊಂದು ವಿಶೇಷ ಎಂದರೆ, ಗ್ರಹಣ ಸಮಯದಲ್ಲೇ ಮಂಗಳ ಗ್ರಹ ಕೂಡ ಚಂದ್ರನ ಸಮೀಪಕ್ಕೆ ಬರಲಿದೆ. ಉತ್ತರ ಅಮೆರಿಕಾ ಹೊರತುಪಡಿಸಿ, 6 ರಾಷ್ಟ್ರಗಳು ರಕ್ತಚಂದ್ರ ಗ್ರಹಣದ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲಿದ್ದಾರೆ.

ಕೆಂಪು ಬಣ್ಣ ಹೇಗೆ ಕಾಣುತ್ತೆ?
ಸಾಮಾನ್ಯವಾಗಿ ಭೂಮಿ, ಸೂರ್ಯ ಹಾಗೂ ಚಂದ್ರ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಈ ಬಾರಿ ಚಂದ್ರನ ಮೇಲೆ ಭೂಮಿಯ ನೆರಳು ಬೀಳುವುದರಿಂದ ಚಂದ್ರ ಸಂಪೂರ್ಣ ಕೆಂಪಾಗಿ ಗೋಚರವಾಗಲಿದೆ.

ಗ್ರಹಣ ಕಾಲದಲ್ಲಿ ಅನೇಕ ಆಚರಣೆಗಳು ದೇಶದಲ್ಲಿ ಚಾಲ್ತಿಯಲ್ಲಿವೆ. ಹೆಚ್ಚಾಗಿ ಗ್ರಹಣ ಕಾಲದಲ್ಲಿ ರಾಶಿ ಫಲವನ್ನು ಹೆಚ್ಚಾಗಿ ನಂಬಲಾಗುತ್ತದೆ. ಗರ್ಭಿಣಿಯರು ಎಚ್ಚರಿಕೆಯಿಂದ ಇರಬೇಕು, ಬರಿಗಣ್ಣಿನಲ್ಲಿ ಗ್ರಹಣ ವೀಕ್ಷಣೆ ಬಗ್ಗೆ ಹಲವಾರು ನಂಬಿಕೆಗಳೂ ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...