alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ನಿರೂಪಕ ಚಂದನ್ ಸಾವಿನಿಂದ ನೊಂದು ಪುತ್ರನ ಹತ್ಯೆಗೈದು ಆತ್ಮಹತ್ಯೆಗೆತ್ನಿಸಿದ ಪತ್ನಿ

ಖಾಸಗಿ ವಾಹಿನಿಯ ನಿರೂಪಕರಾಗಿದ್ದ ಚಂದನ್ ಕಾರಿನಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ವೇಳೆ ದಾವಣಗೆರೆ ಹನಗವಾಡಿ ಬಳಿ ಇವರಿದ್ದ ಕಾರು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು.

ಪತಿಯ ಆಕಾಲಿಕ ಸಾವಿನಿಂದ ನೊಂದು ಅವರ ಪತ್ನಿ ಮೀನಾ, ತಮ್ಮ ಪುತ್ರ 13 ವರ್ಷದ ತುಷಾರ್ ನನ್ನು ಹತ್ಯೆಗೈದು ಬಳಿಕ ತಾವೂ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ ಇಂದು ನಡೆದಿದೆ.

ಉದಯ ಮ್ಯೂಸಿಕ್, ಕಸ್ತೂರಿ ಸೇರಿದಂತೆ ಹಲವು ಖಾಸಗಿ ವಾಹಿನಿಗಳಲ್ಲಿ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದ ಚಂದನ್, ಜನಪ್ರಿಯತೆ ಗಳಿಸಿದ್ದರು. ಇದೀಗ ಪತಿ ಸಾವಿನಿಂದ ಕಂಗೆಟ್ಟ ಅವರ ಪತ್ನಿ, ಮಗ ತುಷಾರ್ ನ ಕತ್ತು ಕೊಯ್ದು ಹತ್ಯೆ ಮಾಡಿ ಬಳಿಕ ತಾವು ಆಸಿಡ್ ಕುಡಿದಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಮೀನಾರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...