alex Certify
ಕನ್ನಡ ದುನಿಯಾ       Mobile App
       

Kannada Duniya

ತಹಶೀಲ್ದಾರ್ ಗೆ ಬೆದರಿಕೆ ಹಾಕಿದ್ದ ನಗರಸಭೆ ಸದಸ್ಯ ಅರೆಸ್ಟ್

ಚಿತ್ರದುರ್ಗ: ಚಳ್ಳಕೆರೆ ತಹಶೀಲ್ದಾರ್ ಗೆ ಧಮ್ಕಿ ಹಾಕಿದ್ದ ನಗರಸಭೆ ಸದಸ್ಯರೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಚಳ್ಳಕೆರೆ ನಗರಸಭೆ ಸದಸ್ಯ ಶಿವಮೂರ್ತಿ ಪೊಲೀಸ್ ವಶದಲ್ಲಿದ್ದಾರೆ. ಶಿವಮೂರ್ತಿ, ತಹಶೀಲ್ದಾರ್ ಕಾಂತರಾಜ್ ಅವರಿಗೆ ಫೋನ್ ಮಾಡಿ ಬೆದರಿಕೆ ಹಾಕಿದ್ದು, ಜಾತಿ ನಿಂದನೆ ಮಾಡಿದ್ದಾರೆ.

ಕಾಂಗ್ರೆಸ್ ನಿಂದ ಗೆದ್ದು ಬಿ.ಜೆ.ಪಿ. ಸೇರಿರುವ ಶಿವಮೂರ್ತಿ, ಇನ್ನು ಒಂದೂವರೆ ತಿಂಗಳಲ್ಲಿ ನೀನು ತಹಶೀಲ್ದಾರ್ ಆಗಿರುವುದಿಲ್ಲ ಎಂದು ಬೆದರಿಸಿದ್ದು, ಅವರ ಬೆದರಿಕೆಯ ಆಡಿಯೋ ವೈರಲ್ ಆಗಿದೆ.

ಶಿವಮೂರ್ತಿ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪ್ರಾಣಬೆದರಿಕೆ ಮೊದಲಾದ ಪ್ರಕರಣಗಳಡಿ ದೂರು ನೀಡಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...