alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೊಂದಾಗಿ ಬೆಳಕಿಗೆ ಬರ್ತಿವೆ ಕುಖ್ಯಾತ ಕಳ್ಳನ ಖತರ್ನಾಕ್ ಕೃತ್ಯ

ರಾಜ್ಯ ರಾಜಧಾನಿ ಬೆಂಗಳೂರು ಮಹಿಳೆಯರ ನಿದ್ದೆಗೆಡಿಸಿದ್ದ ಕುಖ್ಯಾತ ಸರಗಳ್ಳ ಅಚ್ಯುತ್ ಕುಮಾರ್ ಗಣಿ ಬಂಧನಕ್ಕೊಳಗಾಗಿದ್ದು, ತಪ್ಪಿಸಿಕೊಳ್ಳಲೆತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡು ಹಾರಿಸಿದ್ದಾರೆ.

ಒಬ್ಬಂಟಿಯಾಗಿ ಬೈಕಿನಲ್ಲಿ ಬಂದು, ಮಹಿಳೆಯರ ಸರ ಎಗರಿಸುತ್ತಿದ್ದ ಅಚ್ಯುತ್ ಕುಮಾರ್ ಬಂಧನಕ್ಕಾಗಿ ಪೊಲೀಸರು ಹಲವು ದಿನಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಕಡೆಗೂ ಆತನ ಬಂಧನವಾಗಿದೆ.

ಅಚ್ಯುತ್ ಕುಮಾರ್ ಈವರೆಗೆ ಎಪ್ಪತ್ತಕ್ಕೂ ಅಧಿಕ ಸರಗಳವು ಪ್ರಕರಣದಲ್ಲಿ ಪಾಲ್ಗೊಂಡಿರಬಹುದೆಂಬ ಶಂಕೆಯನ್ನು ಪೊಲೀಸರು ಹೊಂದಿದ್ದು, ಗುಂಡೇಟಿನಿಂದ ಗಾಯಗೊಂಡಿರುವ ಅಚ್ಯುತ್ ಕುಮಾರ್ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನಿನ್ನೆ ಸಂಜೆ ಪೊಲೀಸ್ ಪೇದೆಯೊಬ್ಬರ ಕಣ್ಣಿಗೆ ಬಿದ್ದು, ಬಂಧನಕ್ಕೊಳಗಾಗಿದ್ದ ಈತ ಇಂದು ಬೆಳಿಗ್ಗೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆತನ ಮೇಲೆ ಗುಂಡು ಹಾರಿಸಲಾಗಿತ್ತು.

ಅಚ್ಯುತ್ ಕುಮಾರ್ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಮಹಿಳೆಯರ ಸರಗಳವು ಮಾಡಿದ್ದು, ಈಗ ಒಂದೊಂದಾಗಿ ಈತನ ಖತರ್ನಾಕ್ ಕೃತ್ಯಗಳು ಬೆಳಕಿಗೆ ಬರುತ್ತಿವೆ. ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಸರಗಳ್ಳತನದ ದೃಶ್ಯಾವಳಿಗಳು ಅಚ್ಯುತ್ ಕುಮಾರ್ ನ ಬಣ್ಣ ಬಯಲು ಮಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...