alex Certify
ಕನ್ನಡ ದುನಿಯಾ       Mobile App
       

Kannada Duniya

ಸರಗಳ್ಳನ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಬಂಧನಕ್ಕೆ ತೆರಳಿದ್ದ ವೇಳೆಯಲ್ಲಿ ಪೊಲೀಸರ ಮೇಲೆಯೇ, ಹಲ್ಲೆಗೆ ಮುಂದಾಗಿದ್ದ ಸರಗಳ್ಳನ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.

ಚಿಕ್ಕಬಾಣವರ ಬಳಿ ಸರಗಳ್ಳ ರಾಮ್ ಸಿಂಗ್ ಮೇಲೆ ನಂದಿನಿ ಲೇಔಟ್ ಠಾಣೆ ಎಸ್.ಐ. ಸೋಮಶೇಖರ್ ಫೈರಿಂಗ್ ಮಾಡಿದ್ದಾರೆ. ಒಂದೇ ದಿನ 3 ಕಡೆಗಳಲ್ಲಿ ಸರಗಳವು ಪ್ರಕರಣ ನಡೆದಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಚಿಕ್ಕಬಾಣವರ ಬಳಿ ಸರಗಳ್ಳ ರಾಮ್ ಸಿಂಗ್ ನನ್ನು ಬಂಧಿಸಲು ಮುಂದಾದಾಗ ಆತ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದು, ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಲಾಗಿದೆ. ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಗಾಯಗೊಂಡಿರುವ ರಾಮ್ ಸಿಂಗ್ ನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...