alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಎಂಟಿಸಿ ಬಸ್ ನಲ್ಲಿ ಸರಗಳ್ಳಿಯರ ಕೈಚಳಕ

ಎಸ್ ಎಸ್ ಎಲ್ ಸಿ ಪಾಸಾಗಿದ್ದಕ್ಕೆ ತನ್ನ ಮಗಳಿಗೆ ಗಿಫ್ಟ್ ಕೊಡಲೆಂದು ಶಿಕ್ಷಕಿಯೊಬ್ಬರು ಖರೀದಿಸಿದ್ದ ಚಿನ್ನದ ಸರವನ್ನು ಬಸ್ ನಲ್ಲಿ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.

ಬಿ.ಎಸ್‌. ಶಶಿಕಲಾ ಸರ ಕಳೆದುಕೊಂಡ ಮಹಿಳೆ. ಶಶಿಕಲಾ, ಎಸ್‌ ಎಸ್‌ ಎಲ್‌ ಸಿ ಪಾಸಾಗಿದ್ದ ತಮ್ಮ ಮಗಳಿಗೆ ಮೊದಲ ಸಪ್ರೈಸ್‌ ಗಿಫ್ಟ್‌ ಆಗಿ ಕೊಡಲು ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಆಗಷ್ಟೇ ಖರೀದಿಸಿ ಶಿವಾಜಿಗರದಿಂದ ಬಿಎಂಟಿಸಿ ಬಸ್ ಹತ್ತಿದ್ದಾರೆ.

ಬಸ್ಸು ಮೈಕೋ ಲೇಔಟ್‌ ಸಮೀಪ ಬಂದಾಗ ಶಶಿಕಲಾ ಗರ್ಭಿಣಿ ಮಹಿಳೆಯೊಬ್ಬರಿಗೆ ಸೀಟು ಬಿಟ್ಟುಕೊಟ್ಟು ತಾವು ನಿಂತಿದ್ದರು. ಜೆ.ಡಿ.ಮರ ನಿಲ್ದಾಣದಲ್ಲಿ ಹತ್ತಿದ್ದ ಮೂವರು ಮಹಿಳೆಯರ ಪೈಕಿ ಒಬ್ಬಾಕೆ ತಲೆ ಸುತ್ತುತ್ತಿದೆ ಎಂದು ಶಶಿಕಲಾ ಮೈಮೇಲೆ ಒರಗುತ್ತಿದ್ದಳು. ದುಪ್ಪಟ್ಟವನ್ನು ಬ್ಯಾಗ್ ಮೇಲೆ ಹಾಕಿ ಹಿಂದಕ್ಕೆ ತೆಗೆದುಕೊಳ್ಳುವ ನೆಪದಲ್ಲಿ ಮಹಿಳೆ, ಬ್ಯಾಗ್ ನಲ್ಲಿದ್ದ ಹೊಸ ಸರವನ್ನು ಎಗರಿಸಿದ್ದಾಳೆ.

ಸರ ಕದ್ದ ಮಹಿಳೆ ಬಿಳೇಕಳ್ಳಿ ನಿಲ್ದಾಣದಲ್ಲಿ ಇಳಿದುಕೊಂಡಿದ್ದು, ಇನ್ನಿಬ್ಬರು ಮಹಿಳೆಯರು ಅರಕೆರೆ ನಿಲ್ದಾಣದಲ್ಲಿ ಇಳಿದು ಹೋಗಿದ್ದಾರೆ ಎಂದು ಶಶಿಕಲಾ ದೂರಿದ್ದಾರೆ. ಈ ಕುರಿತು ಹುಳಿಮಾವು ಠಾಣೆಯಲ್ಲಿ ಶಶಿಕಲಾ ಪ್ರಕರಣ ದಾಖಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...