alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಖತರ್ನಾಕ್ ಕೃತ್ಯ

chain-snatchers_0_0_0_0_0_0_0_0

ಬೆಂಗಳೂರು: ಇದುವರೆಗೂ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯರ ಬಂಗಾರದ ಸರ ಕದ್ದುಕೊಂಡು ಹೋಗುತ್ತಿದ್ದ ದುಷ್ಕರ್ಮಿಗಳು ಕಳೆದ ರಾತ್ರಿ ಮುಚ್ಚಿದ್ದ ಅಂಗಡಿಯೊಂದರ ಶಟರ್ ಎಳೆದು ಒಳ ನುಗ್ಗಿ ಮಹಿಳೆಯ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ.

ಬೆಂಗಳೂರು ಹೊರ ವಲಯದ ಕೊಪ್ಪ- ಬೇಗೂರು ರಸ್ತೆಯಲ್ಲಿರುವ ಕಾರ್ಮಲ್ ಗ್ರಾಮ್ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು, ಇಲ್ಲಿ ಬೇಕರಿ ಹಾಗೂ ಟೀ ಅಂಗಡಿ ನಡೆಸುತ್ತಿದ್ದ ಸಜ್ಜು ಎಂಬವರ ಅಂಗಡಿಯ ಶಟರ್ ಎಳೆದು ಒಳ ಪ್ರವೇಶಿಸಿರುವ ಕಳ್ಳರು ಈ ಕೃತ್ಯವೆಸಗಿದ್ದಾರೆ.

ರಾತ್ರಿ 9-30 ರ ಸುಮಾರಿಗೆ ಸಜ್ಜು ಅವರು ತಮ್ಮ ಅಂಗಡಿಯ ಶಟರ್ ಎಳೆದು ಒಳಗಡೆ ಐಟಂ ಗಳನ್ನು ಜೋಡಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಪತ್ನಿ ಅನಿಲಾ ಸಹ ಇದ್ದರು. ಈ ವೇಳೆ ಮುಚ್ಚಿದ್ದ ಶಟರ್ ಎಳೆದವನೊಬ್ಬ ಸಿಗರೇಟ್ ಕೇಳಿದ್ದಾನೆ. ಸಜ್ಜು ಅಂಗಡಿ ಕ್ಲೋಸ್ ಆಗಿದೆ ಎಂದು ಹೇಳುತ್ತಿದ್ದಾಗಲೇ ಮತ್ತೊಬ್ಬನೂ ಒಳ ಪ್ರವೇಶಿಸಿದ್ದಾನೆ.

ಒಳ ಬಂದ ದುಷ್ಕರ್ಮಿಗಳು ಬಳಿಕ ಶಟರ್ ಎಳೆದು ಡ್ಯಾಗರ್ ನಿಂದ ಸಜ್ಜು ಅವರನ್ನು ಇರಿಯಲು ಯತ್ನಿಸಿದ್ದಾರೆ. ಇದರಿಂದ ಸಜ್ಜು ಅವರ ಕೈಗೆ ಗಾಯವಾಗಿದ್ದು, ದುಷ್ಕರ್ಮಿಗಳು ತಡೆಯಲು ಮುಂದಾದ ಅನಿಲಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡ ದುಷ್ಕರ್ಮಿಗಳು ತಾವು ತಂದಿದ್ದ ಪಲ್ಸರ್ ಬೈಕ್ ನಲ್ಲಿ ಪರಾರಿಯಾಗಿದ್ದಾರೆ. ಈ ದೃಶ್ಯಾವಳಿಗಳೆಲ್ಲವೂ ಅಂಗಡಿಯಲ್ಲಿದ್ದ ಸಿಸಿ ಟಿವಿ ಯಲ್ಲಿ ಸೆರೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...