alex Certify
ಕನ್ನಡ ದುನಿಯಾ       Mobile App
       

Kannada Duniya

ಸರಗಳವು ಮಾಡುತ್ತಿದ್ದ ಟೆಕ್ಕಿ ಅಂದರ್…!

ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳಿಗೆ ಕೈತುಂಬ ಸಂಬಳ ಸಿಗುತ್ತದೆ ಎಂಬ ಮಾತಿದೆ. ಅಂತದ್ದರಲ್ಲಿ ಟೆಕ್ಕಿಯೊಬ್ಬ ಸರಗಳವು ಮಾಡುತ್ತಿದ್ದ ಘಟನೆಯೊಂದು ನಡೆದಿದೆ.

ಬೆಂಗಳೂರಿನಲ್ಲಿ ಬೆಳಕಿಗೆ ಬಂದಿರುವ ಈ ಘಟನೆ ಅಚ್ಚರಿ ಮತ್ತು ಆಘಾತವನ್ನುಂಟು ಮಾಡಿದೆ. ಎಚ್ಎಸ್ಆರ್ ಲೇಔಟ್ ಠಾಣೆ ಪೊಲೀಸರು 35 ವರ್ಷದ ಪ್ರಭಾಕರ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ ವೇಳೆ ಈತ ಸಾಫ್ಟ್ ವೇರ್ ಕಂಪನಿಯೊಂದರ ಉದ್ಯೋಗಿ ಎಂಬುದು ತಿಳಿದು ಬಂದಿದೆ ಎನ್ನಲಾಗಿದೆ.

ಈತ ಎಚ್ಎಸ್ಆರ್ ಲೇಔಟ್, ಜಯನಗರ, ಕೋರಮಂಗಲ ಸೇರಿದಂತೆ ಹಲವು ಕಡೆ ಸರಗಳವು ಮಾಡಿದ್ದಾನೆಂಬ ಶಂಕೆ ವ್ಯಕ್ತವಾಗಿದ್ದು, ವ್ಯವಹಾರವೊಂದರಲ್ಲಿ ನಷ್ಟ ಉಂಟಾದ ಕಾರಣ ಸಾಲ ತೀರಿಸಲು ಈ ಮಾರ್ಗ ಹಿಡಿದಿದ್ದನೆಂದು ಹೇಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...