alex Certify
ಕನ್ನಡ ದುನಿಯಾ       Mobile App
       

Kannada Duniya

ವರ್ಷಪೂರ್ತಿ ಬಿಡುಗಡೆಯಾಗಬೇಕಿದ್ದ ಕಾವೇರಿ ನೀರು ಮೂರೇ ತಿಂಗಳಲ್ಲಿ ತಮಿಳುನಾಡಿಗೆ…!

ಬೆಂಗಳೂರು: ವರ್ಷಪೂರ್ತಿ ತಮಿಳುನಾಡಿಗೆ ಬಿಡುಗಡೆಯಾಗಬೇಕಿದ್ದ ಕಾವೇರಿ ನೀರು ಮೂರೂವರೆ ತಿಂಗಳಲ್ಲಿ ಹರಿದು ಹೋಗಿದ್ದು, ಮುಂದಿನ ತಿಂಗಳುಗಳಲ್ಲಿ ನಿಗದಿಯಂತೆ ನೀರು ಹರಿಸಬೇಕೇ ಬೇಡವೇ ಎಂಬ ಗೊಂದಲ ಈಗ ಆರಂಭವಾಗಿದೆ.

ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾದ ಹಿನ್ನಲೆಯಲ್ಲಿ ಈಗಾಗಲೇ ತಮಿಳುನಾಡಿಗೆ ರಾಜ್ಯ ಹರಿಸಬೇಕಿದ್ದ ನೀರಿನ ಪ್ರಮಾಣಕ್ಕಿಂತಲೂ ಅಧಿಕ ನೀರು ಹರಿದಿದೆ. ತಮಿಳುನಾಡಿಗೆ ಕಾವೇರಿಯಿಂದ ಹರಿಸಬೇಕಾದ 192 ಟಿಎಂಸಿ ಅಡಿ ನೀರಿನ ಪ್ರಮಾಣವನ್ನು ರಾಜ್ಯ ಸರ್ಕಾರದ ವಿಶೇಷ ಮೇಲ್ಮನವಿಯ ಮೇಲಿನ ತೀರ್ಪಿನಲ್ಲಿ ಸುಪ್ರೀಂಕೋರ್ಟ್‌ 177.25 ಟಿಎಂಸಿ ಅಡಿಗೆ ಇಳಿಸಿತ್ತು. ಕರ್ನಾಟಕ– ತಮಿಳುನಾಡು ಗಡಿಯಲ್ಲಿರುವ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ಸೋಮವಾರದವರೆಗೆ (ಆ.13) 187.30 ಟಿಎಂಸಿ ಅಡಿ ಮೆಟ್ಟೂರು ಜಲಾಶಯ ಸೇರಿರುವುದು ದಾಖಲಾಗಿದೆ.

ಜೂನ್‌ನಿಂದ ಮೇ ವರೆಗೆ, ಪ್ರತಿ ತಿಂಗಳು ತಮಿಳುನಾಡಿಗೆ ಹರಿಸಬೇಕಾದ ಒಟ್ಟು ನೀರಿನ ಪ್ರಮಾಣವನ್ನು ಸುಪ್ರೀಂಕೋರ್ಟ್‌ ನಿಗದಿಪಡಿಸಿದೆ. ತಮಿಳುನಾಡಿಗೆ ಒಟ್ಟು ಹರಿಸಬೇಕಾದ ನೀರಿನ ಪ್ರಮಾಣಕ್ಕಿಂತಲೂ 10 ಟಿಎಂಸಿ ಹೆಚ್ಚು ನೀರು ಈಗಾಗಲೇ ಹರಿದು ಹೋಗಿದೆ. ಅಷ್ಟೇ ಅಲ್ಲ, ಸುಪ್ರೀಂಕೋರ್ಟ್‌ ನಿಗದಿಪಡಿಸಿದ ಪ್ರಕಾರ, ಜೂನ್‌ನಿಂದ ಆಗಸ್ಟ್‌ 13ರವರೆಗೆ 59.70 ಟಿಎಂಸಿ ಅಡಿ ನೀರು ಹರಿಸಬೇಕಿತ್ತು. ಆದರೆ, ಅದರ ಮೂರು ಪಟ್ಟು ಹೆಚ್ಚು ನೀರು ಮೆಟ್ಟೂರು ಜಲಾಶಯದ ಒಡಲು ಸೇರಿದೆ.

ಒಂದು ತಿಂಗಳು ಹೆಚ್ಚು ನೀರು ಬಿಡುಗಡೆ ಮಾಡಿದರೆ ಅದನ್ನು ನಂತರದ ತಿಂಗಳುಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳಬೇಕು. ಈ ವರ್ಷ ತಮಿಳುನಾಡಿಗೆ ತಿಂಗಳುವಾರು ನಿಗದಿಪಡಿಸಿದ ನೀರು ಕೊಡುವ ಅಗತ್ಯ ಬರುವುದಿಲ್ಲ. ಜೂನ್‌ನಲ್ಲಿ 3 ಟಿಎಂಸಿ ಅಡಿಗೂ ಹೆಚ್ಚು ನೀರು ಹರಿದುಹೋಗಿದೆ. ಅದನ್ನು ಜುಲೈ ತಿಂಗಳಿಗೆ ಲೆಕ್ಕಕ್ಕೆ ತೆಗೆದುಕೊಳ್ಳುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದಲ್ಲಿ ವಾದ ಮಂಡಿಸಲಾಗಿದೆ ಎಂದು ಜಲ ಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...