alex Certify
ಕನ್ನಡ ದುನಿಯಾ       Mobile App
       

Kannada Duniya

ಕಾವೇರಿ ಅಧ್ಯಯನ ತಂಡ ರಚನೆ

sc

ನವದೆಹಲಿ: ತಮಿಳುನಾಡಿಗೆ ಅಕ್ಟೋಬರ್ 7 ರಿಂದ 18 ರ ವರೆಗೆ ಪ್ರತಿದಿನ 2,000 ಕ್ಯೂಸೆಕ್ ಕಾವೇರಿ ನದಿ ನೀರು ಹರಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.

ಕಾವೇರಿ ನಿರ್ವಹಣಾ ಮಂಡಳಿಗೆ ತಡೆ ನೀಡಿರುವ ಕೋರ್ಟ್, ಅಧ್ಯಯನ ತಂಡ ರಚನೆ ಮಾಡಿದೆ. ಕಾವೇರಿ ಕೊಳ್ಳದ ಜಲಾಶಯಗಳ ಕುರಿತು ಅಧ್ಯಯನ ನಡೆಸಿ ಅಕ್ಟೋಬರ್ 17 ರೊಳಗೆ ವರದಿ ನೀಡಲು ತಂಡಕ್ಕೆ ಸೂಚಿಸಿದೆ. ಕೇಂದ್ರೀಯ ಜಲ ಆಯೋಗದ ಅಧ್ಯಕ್ಷ ಜಿ.ಎಸ್. ಝಾ ನೇತೃತ್ವದಲ್ಲಿ ಅಧ್ಯಯನ ತಂಡದಲ್ಲಿ 4 ರಾಜ್ಯಗಳ ಮುಖ್ಯ ಇಂಜಿನಿಯರ್ ಗಳು ಸದಸ್ಯರಾಗಿರುತ್ತಾರೆ.

ರಾಜ್ಯದ ಪರ ವಕೀಲ ಫಾಲಿ ಎಸ್.ನಾರಿಮನ್ ಸಮರ್ಥವಾಗಿಯೇ ವಾದ ಮಂಡಿಸಿದರು. 6 ದಿನಗಳ ಕಾಲ ದಿನ 1000 ಕ್ಯೂಸೆಕ್ ನೀರು ಹರಿಸುವುದಾಗಿ ರಾಜ್ಯ ಸರ್ಕಾರ ಹೇಳಿತ್ತಾದರೂ ವಿಚಾರಣೆ ನಡೆದು, ಅಕ್ಟೋಬರ್ 7 ರಿಂದ 18 ರ ವರೆಗೆ ದಿನ 2000 ಕ್ಯೂಸೆಕ್ ನೀರು ಹರಿಸಲು ಆದೇಶ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...