alex Certify
ಕನ್ನಡ ದುನಿಯಾ       Mobile App
       

Kannada Duniya

ಕಾವೇರಿ ತೀರ್ಪು: ಕರ್ನಾಟಕಕ್ಕೆ ಗೆಲುವು, ತಮಿಳುನಾಡಿಗೆ ಮುಖಭಂಗ

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠದಿಂದ ಇಂದು ಮಹತ್ವದ ತೀರ್ಪು ನೀಡಲಾಗಿದ್ದು, ರಾಜ್ಯಕ್ಕೆ ಪರೋಕ್ಷವಾಗಿ ಗೆಲುವು ಸಿಕ್ಕಿದೆ.

ಕರ್ನಾಟಕದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಿದೆ. ರಾಜ್ಯಕ್ಕೆ ಹೆಚ್ಚುವರಿಯಾಗಿ 14.75 ಟಿ.ಎಂ.ಸಿ. ನೀರು ಹೆಚ್ಚುವರಿಯಾಗಿ ಸಿಕ್ಕಿದೆ. ಬೆಂಗಳೂರಿಗೆ 4.5 ಟಿಎಂಸಿ ಹೆಚ್ಚುವರಿ ಕುಡಿಯುವ ನೀರು ಬಳಸಲು ಮತ್ತು ಕರ್ನಾಟಕದಲ್ಲಿ ನೀರಾವರಿ ಪ್ರದೇಶ ವಿಸ್ತರಿಸಲು ಅವಕಾಶ ನೀಡಿದೆ.

ತಮಿಳುನಾಡು ತನ್ನಲ್ಲಿರುವ 20 ಟಿ.ಎಂ.ಸಿ. ಅಂತರ್ಜಲವನ್ನು ಪರಿಗಣಿಸಬೇಕು. ಕಾವೇರಿ ನಿರ್ವಹಣಾ ಮಂಡಳಿ ರಚನೆ ಕೆಲಸ ಕೇಂದ್ರದ್ದೇ ಹೊರತು ಸುಪ್ರೀಂ ಕೋರ್ಟ್ ಗೆ ಸೇರಿದ್ದಲ್ಲ. ಈಗ ನೀಡಿರುವ ತೀರ್ಪು ಮುಂದಿನ 15 ವರ್ಷಗಳಿಗೆ ಅನ್ವಯಿಸುತ್ತದೆ ಎಂದು ಕೋರ್ಟ್ ಹೇಳಿದ್ದು, ಇದು ರಾಜ್ಯಕ್ಕೆ ಸಿಕ್ಕಿರುವ ಮಹತ್ವದ ಗೆಲುವು ಮತ್ತು ವರದಾನವಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...