alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಪಾದಚಾರಿಗಳು ಬೆಚ್ಚಿ ಬೀಳುವಂತಹ ಸುದ್ದಿ

ಬೆಂಗಳೂರು: ಪಾದಚಾರಿಗಳು, ವಾಹನ ಸವಾರರು ರಸ್ತೆಯನ್ನು ದಾಟುವಾಗ, ವಾಹನ ಚಾಲನೆ ಮಾಡುವಾಗ ಗಮನಿಸದಿದ್ದರೆ ಏನೆಲ್ಲಾ ಆಗುತ್ತೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ನಡಿ ಸಿಲುಕಿದ ವ್ಯಕ್ತಿಯ ಮೃತದೇಹವನ್ನು ಬರೋಬ್ಬರಿ 70 ಕಿಲೋಮೀಟರ್ ವರೆಗೂ ಎಳೆದು ತಂದಿರುವ ಘಟನೆ ನಡೆದಿದೆ. ಶಾಂತಿನಗರ ಡಿಪೋಗೆ ಸೇರಿದ ಬಸ್ ತಮಿಳುನಾಡಿನಿಂದ ಮೈಸೂರು ರಾಮನಗರ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಚನ್ನಪಟ್ಟಣ ಬಳಿ ಅಪರಿಚಿತ ವ್ಯಕ್ತಿಯೊಬ್ಬನಿಗೆ ಡಿಕ್ಕಿ ಹೊಡೆದಿದೆ.

ಹಂಪ್ಸ್ ಬಳಿ ಶಬ್ಧ ಬಂದ ಕಾರಣ, ಬಸ್ ಕಲ್ಲು ಇಲ್ಲವೇ ನಾಯಿಗೆ ಡಿಕ್ಕಿ ಹೊಡೆದಿರಬಹುದೆಂದು ಭಾವಿಸಿದ ಚಾಲಕ ಬಸ್ ನಿಲ್ಲಿಸದೇ ಚಾಲನೆ ಮಾಡಿಕೊಂಡು ಬಂದಿದ್ದಾನೆ. ವ್ಯಕ್ತಿಯ ಮೃತದೇಹ ಬಸ್ ನಡಿ ಸಿಲುಕಿ, 70 ಕಿಲೋ ಮೀಟರ್ ದೂರದವರೆಗೂ ನೆಲಕ್ಕೆ ಉಜ್ಜಿಕೊಂಡು ಬಂದಿದೆ.

ಭಾನುವಾರ ಬೆಳಗಿನ ಜಾವ 2.30 ಕ್ಕೆ ಪ್ರಯಾಣಿಕರನ್ನು ಇಳಿಸಿ ಡಿಪೋದಲ್ಲಿ ಬಸ್ ನಿಲ್ಲಿಸಿದ ಚಾಲಕ ಹಿಂಭಾಗದಲ್ಲಿ ಬಂದು ಗಮನಿಸಿದ್ದಾನೆ. ಬಸ್ ಅಡಿಗೆ ಮೃತದೇಹ ಸಿಲುಕಿರುವುದು ಕಂಡು ಬಂದಿದ್ದು, ಅದನ್ನು ಮತ್ತೊಂದು ಬಸ್ ನಲ್ಲಿಟ್ಟು ಮನೆಗೆ ತೆರಳಿದ್ದಾನೆ.

ಬಸ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಮೃತದೇಹ ಕಂಡು ಬಂದಿದ್ದರಿಂದ ಡಿಪೋ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಲ್ಸನ್ ಗಾರ್ಡನ್ ಠಾಣೆ ಪೊಲೀಸರು ತನಿಖೆ ನಡೆಸಿದಾಗ 70 ಕಿಲೋ ಮೀಟರ್ ದೂರದವರೆಗೂ ಮೃತದೇಹ ಎಳೆದು ತಂದಿರುವುದು ಗಮನಕ್ಕೆ ಬಂದಿದೆ. ಚಾಲಕನನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ ಪೊಲೀಸರು 3 ದಿನ ವಶಕ್ಕೆ ಪಡೆದುಕೊಂಡುಕೊಂಡಿದ್ದಾರೆ. ಚಾಲಕನನ್ನು ಘಟನಾ ಸ್ಥಳಕ್ಕೆ ಕರೆದೊಯ್ಯಲು ಪೊಲೀಸರು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...