alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಕಿಂಗ್ ನಲ್ಲಿ ನಡೀತು ಊಹಿಸಲಾಗದಂಥ ಘಟನೆ

ಕರ್ನಾಟಕದ ಪೊಲೀಸ್ ಅಧಿಕಾರಿ ಡಿ. ರೂಪಾ ಸುರಕ್ಷಿತ ಜಾಗದಲ್ಲಿ ವಾಹನ ಪಾರ್ಕಿಂಗ್ ಮಾಡುವಂತೆ ಟ್ವೀಟ್ ಮಾಡಿದ್ದಾರೆ. ಇದಕ್ಕೊಂದು ಕಾರಣ ಕೂಡ ಇದೆ. ಡಿ.ರೂಪಾ ಶೇರ್ ಮಾಡಿರೋ ವಿಡಿಯೋ ನೋಡಿದ್ರೆ ನಿಮಗೂ ಅದು ಅರ್ಥವಾಗದೇ ಇರುವುದಿಲ್ಲ.

ಕಿರಾಣಿ ಅಂಗಡಿ ಮುಂದೆ ಬೈಕ್ ಪಾರ್ಕ್ ಮಾಡಲು ಹೋದ ವ್ಯಕ್ತಿಗೆ ಏನಾಯ್ತು ಅನ್ನೋದನ್ನು ನೋಡಿದ್ರೆ ಎಂಥವರು ಕೂಡ ಬೆಚ್ಚಿ ಬೀಳ್ತಾರೆ. ಸಿಸಿ ಟಿವಿ ಕ್ಯಾಮರಾದಲ್ಲಿ ಆ ದೃಶ್ಯ ಸೆರೆಯಾಗಿದೆ. ಅಂಗಡಿಯ ಬಲಭಾಗದಲ್ಲೊಂದು ಬೈಕ್ ನಿಂತಿತ್ತು. ಅಲ್ಲಿಗೆ ಬಂದ ಇನ್ನೊಬ್ಬ ಅದರ ಪಕ್ಕದಲ್ಲೇ ತನ್ನ ಬೈಕ್ ನಿಲ್ಲಿಸಲು ಮುಂದಾಗಿದ್ದಾನೆ.

ಈ ವೇಳೆ ನಿಯಂತ್ರಣ ತಪ್ಪಿ ಬೈಕ್ ಕೆಳಕ್ಕೆ ಬಿದ್ದಿದೆ. ಬೈಕ್ ಸವಾರ ಕೂಡ ಕೆಳಕ್ಕೆ ಉರುಳಿ ಮಾಯವಾಗಿದ್ದಾನೆ. ಅಷ್ಟಕ್ಕೂ ಆತ ಚರಂಡಿಯೊಳಗೆ ಬಿದ್ದಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಕೂಡಲೇ ಬಂದು ಬೈಕ್ ಹಾಗೂ ಸವಾರನನ್ನು ಮೇಲಕ್ಕೆತ್ತಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...