alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಗಡಿ ಮಾಲೀಕರಿಗೆ ತಲೆನೋವಾಗಿದ್ದಾರೆ ಸಿಗರೇಟ್-ಚಾಕೋಲೇಟ್ ಪ್ರಿಯ ಕಳ್ಳರು

ಆಶ್ಚರ್ಯ ಆದ್ರೂ ನಿಜ. ಬೆಂಗಳೂರಿನಲ್ಲಿ ಕೇವಲ ಸಿಗರೇಟ್ ಹಾಗೂ ಚಾಕೋಲೇಟ್ ಮಾತ್ರ ಕದಿಯುವ ಚೋರರು ಹುಟ್ಟಿಕೊಂಡಿದ್ದಾರೆ. ಇವರುಗಳು ಕಳ್ಳತನ ಮಾಡುವ ವೇಳೆ ಸಿಗರೇಟ್ ಹಾಗೂ ಚಾಕೋಲೇಟ್ ಬಿಟ್ಟು ಬೇರೆ ವಸ್ತುವಿನ ಕಡೆ ತಿರುಗಿಯೂ ನೋಡುವುದಿಲ್ಲ.

ಕಳ್ಳತನ ಮಾಡುವಾಗ ಪಕ್ಕದಲ್ಲಿ ಅದೆಷ್ಟೇ ಬೆಲೆ ಬಾಳುವ ವಸ್ತುಗಳಿದ್ದರೂ ಇವರಿಗೆ ಅದು ಲೆಕ್ಕಕ್ಕೇ ಇಲ್ಲ. ಈ ಕಳ್ಳರೀಗ ವ್ಯಾಪಾರಸ್ಥರಿಗೆ ತಲೆನೋವಾಗಿ ಪರಿಣಮಿಸಿದ್ದಾರೆ. ಬೆಂಗಳೂರಿನಲ್ಲಿ ಕೆಲವು ದಿನಗಳಿಂದ ಹಲವಾರು ಪ್ರದೇಶಗಳಲ್ಲಿ ಈ ರೀತಿಯ ಘಟನೆಗಳು ನಡೆದಿವೆ ಎಂದು ತಿಳಿದು ಬಂದಿದೆ.

ಜೂನ್ 3 ರಂದು ಬ್ರಿಗೇಡ್ ರೋಡ್ ನಲ್ಲಿ ನಡೆದಿರುವ ಕಳವಿನ ಕುರಿತು ಮಾಹಿತಿ ನೀಡಿರುವ ಅಂಗಡಿ ಮಾಲೀಕ ಕಮಲ್ ಪಾಂಡೆ, ಸಿಗರೇಟ್ ಹಾಗೂ ಚಾಕೋಲೇಟ್ ಬಿಟ್ಟು ನನ್ನ ಅಂಗಡಿಯಲ್ಲಿ ಮತ್ತೇನೂ ಕಳವಾಗಿಲ್ಲ. ಹಲವಾರು ಬೆಲೆ ಬಾಳುವ ವಸ್ತುಗಳು ಇದ್ದರೂ ಚೋರರು ಅದರ ಕಡೆ ತಿರುಗಿಯೂ ನೋಡಿಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರಿಗೆ ಸಿಸಿ ಟಿವಿ ದೃಶ್ಯಾವಳಿಗಳು ಸಿಕ್ಕಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...