alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಕ್ಕಡ್ಡ ಬಂತೆಂದು ಸ್ಥಗಿತಗೊಂಡ ಮೆಟ್ರೋ ಸಂಚಾರ

ಬೆಂಗಳೂರು: ಮನುಷ್ಯರು ಎಲ್ಲಿಗಾದರೂ ಹೊರಡುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ಸ್ವಲ್ಪಹೊತ್ತು ನಿಂತು ಹೋಗುವುದನ್ನು ನೋಡಿದ್ದೇವೆ. ಆದರೆ ಬೆಕ್ಕು ಅಡ್ಡ ಬಂತೆಂದು ಮೆಟ್ರೋ ಸಂಚಾರವನ್ನೇ ಸ್ಥಗಿತಗೊಳಿಸಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.

ಆದರೆ ಇಲ್ಲಿ ಮೆಟ್ರೋ ಸಂಚಾರವನ್ನು ಕೆಲ ಹೊತ್ತು ಸ್ಥಗಿತಗೊಳಿಸಿದ್ದು, ಅಪಶಕುನ ಎಂದಲ್ಲ, ಬೆಕ್ಕು ಸತ್ತು ಹೋಗಬಹುದು ಎಂಬ ಕಾರಣಕ್ಕೆ.

ಜಾಲಹಳ್ಳಿ ಮೆಟ್ರೋ ನಿಲ್ದಾಣದ ಹಳಿಗಳ ನಡುವೆ ಸಂಜೆ 7:30ರ ಸುಮಾರಿಗೆ ಬೆಕ್ಕೊಂದು ಪ್ರತ್ಯಕ್ಷವಾಗಿದೆ. ಅತ್ತಿಂದಿತ್ತ ಓಡಾಡುತ್ತಿದ್ದ ಬೆಕ್ಕು ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಗಾಬರಿಗೊಳಿಸಿದೆ. ಮೆಟ್ರೋಗೆ ಅಳವಡಿಸಿರುವ ಹೈ ವೋಲ್ಟೇಜ್ ವಿದ್ಯುತ್ ಬೆಕ್ಕಿಗೆ ಸ್ಪರ್ಶಿಸಿದರೆ ಬೆಕ್ಕು ಸಾಯುತ್ತದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮೆಟ್ರೋ ಸಂಚಾರವನ್ನು 5 ನಿಮಿಷ ನಿಲ್ಲಿಸಿ ಬೆಕ್ಕಿಗಾಗಿ ಹುಡುಕಾಟ ನಡೆಸಲಾಗಿದೆ.

ಜಾಲಹಳ್ಳಿಯ ಹಿಂದಿನ ಹಾಗೂ ಮುಂದಿನ ನಿಲ್ದಾಣಗಳ ನಿಯಂತ್ರಣ ಕೊಠಡಿಗೂ ಸಂದೇಶ ಕಳುಹಿಸಿ, ಅಲ್ಲಿನ ರೈಲು ಸಂಚಾರವನ್ನು 5 ನಿಮಿಷ ಸ್ಥಗಿತಗೊಳಿಸಲಾಗಿದೆ. ಬೇರೆ ನಿಲ್ದಾಣಗಳಿಗೆ ಸೂಚನೆ ನೀಡಿ ಅಷ್ಟೇ ನಿಮಿಷಗಳ ಕಾಲ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಕೆಲಹೊತ್ತು ಬೆಕ್ಕನ್ನು ಹುಡುಕಿದರೂ ಅದು ಸಿಕ್ಕಿಲ್ಲ. ಬಳಿಕ ಮೆಟ್ರೋ ಸಂಚಾರ ಮತ್ತೆ ಆರಂಭಿಸಲಾಗಿದೆ. ಸಂಪೂರ್ಣ ಮೆಟ್ರೋ ಸಂಚಾರ ಸ್ಥಗಿತಗೊಂಡ ರಾತ್ರಿ 11 ಗಂಟೆ ಬಳಿಕವೂ ಮೆಟ್ರೋ ಸಿಬ್ಬಂದಿ ಬೆಕ್ಕಿಗಾಗಿ ಹುಡುಕಾಡಿದ್ದಾರೆ. ಆದರೂ ಬೆಕ್ಕು ಮಾತ್ರ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...