alex Certify
ಕನ್ನಡ ದುನಿಯಾ       Mobile App
       

Kannada Duniya

ಡಿನೋಟಿಫೀಕೇಶನ್ ಕೇಸ್: ತೀರ್ಪು ನಾಳೆಗೆ ಮುಂದೂಡಿಕೆ

ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಕೇಸ್ ಗೆ ಸಂಬಂಧಿಸಿದಂತೆ ಎಸಿಬಿಯಲ್ಲಿ ತಮ್ಮ ವಿರುದ್ದ ದಾಖಲಾಗಿರುವ ಪ್ರಕರಣಗಳನ್ನು ರದ್ದು ಮಾಡುವಂತೆ ಕೋರಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆಯ ಮಧ್ಯಂತರ ತೀರ್ಪು ನಾಳೆ ಹೊರ ಬೀಳಲಿದೆ.

ಕಾನೂನು ಮೀರಿ ಡಿನೋಟಿಫೈ ಮಾಡಿಲ್ಲ. ಯಾವುದೇ ಅಕ್ರಮ ಎಸಗಿಲ್ಲ. ರಾಜಕೀಯ ಸೇಡಿನ ಕ್ರಮದಿಂದ ಈ ಕೇಸ್ ದಾಖಲಿಸಲಾಗಿದೆ ಎಂದು ಯಡಿಯೂರಪ್ಪನವರು ಆರೋಪಿಸಿದ್ದು, ಈ ಕುರಿತು ವಾದ-ವಿವಾದ ಆಲಿಸಿದ್ದ ನ್ಯಾಯಾಧೀಶ ಅರವಿಂದ್ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಇಂದು ಮಧ್ಯಂತರ ತೀರ್ಪು ಪ್ರಕಟಿಸಬೇಕಿತ್ತು.

ಸಮಯದ ಅಭಾವದ ಕಾರಣ ತೀರ್ಪನ್ನು ನಾಳೆಗೆ ಮುಂದೂಡಲಾಗಿದೆ. ಯಡಿಯೂರಪ್ಪನವರ ವಿರುದ್ದ ದಾಖಲಾಗಿದ್ದ ಎರಡು ಎಫ್ಐಆರ್ ಗಳ ಕುರಿತು ಎಸಿಬಿ ತನಿಖೆ ನಡೆಸಲು ಮುಂದಾಗಿದ್ದು, ಪ್ರಕರಣ ರದ್ದು ಮಾಡುವಂತೆ ಕೋರಿ ಬಿ.ಎಸ್.ವೈ. ಮನವಿ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...