alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಮಾಲೀಕರಿಗೆ ಬಂತು ಹೆಲ್ಮೆಟ್ ಧರಿಸಿಲ್ಲವೆಂಬ ಚಲನ್

challan

ರಾಜ್ಯದಲ್ಲಿ ದ್ವಿಚಕ್ರ ವಾಹನ ಸವಾರರು ಮಾತ್ರವಲ್ಲದೇ ಹಿಂಬದಿ ಸವಾರರೂ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿಗೆ ಬಂದಿದೆ. ಆದರೆ ಈ ಕಾನೂನು ಕಾರಿಗೂ ವಿಸ್ತರಿಸಲಾಗಿದೆಯಾ ಎಂಬ ಅನುಮಾನ ಈಗ ಮೂಡಿದೆ. ಅಷ್ಟಕ್ಕೂ ಆಗಿದ್ಧೇನು. ಮುಂದೆ ಓದಿ.

ಭಾರತೀಯ ಜನತಾ ಪಕ್ಷದ ಮುಖಂಡ ಎಸ್. ಪ್ರಕಾಶ್ ಅವರಿಗೆ ಭಾನುವಾರದಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ಚಲನ್ ಬಂದಿದೆ. ಅದರಲ್ಲಿ ಹಿಂಬದಿ ಕುಳಿತಿದ್ದ ಸವಾರ ಹೆಲ್ಮೆಟ್ ಧರಿಸದಿದ್ದಕ್ಕೆ ನೂರು ರೂ. ದಂಡ ಪಾವತಿಸಲು ಸೂಚಿಸಲಾಗಿದೆ.

ಆದರೆ ಅಂತಹ ಯಾವುದೇ ನಿಯಮ ಉಲ್ಲಂಘನೆ ಮಾಡಿರದ ಪ್ರಕಾಶ್, ಚಲನ್ ವೀಕ್ಷಿಸಿದಾಗ ದಂಗಾಗಿದ್ದಾರೆ. ಅಲ್ಲಿ ಅವರ ಇನ್ನೋವಾ ಕಾರಿನ ರಿಜಿಸ್ಟ್ರೇಷನ್ ನಂಬರ್ ಕಂಡು ಬಂದಿದೆ. ಕೂಡಲೇ ಅವರು ಇದನ್ನು ಉನ್ನತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ತಾಂತ್ರಿಕ ದೋಷದಿಂದ ಹೀಗಾಗಿದೆ ಎಂಬ ಸಮಜಾಯಿಷಿ ಸಿಕ್ಕಿದೆ. ಆದರೆ ನಿಯಮ ಉಲ್ಲಂಘನೆ ಮಾಡಿರದಿದ್ದರೂ ಇನ್ನೂ ಎಷ್ಟು ಮಂದಿ ಈ ರೀತಿ ಚಲನ್ ಪಡೆದಿರಬಹುದೆಂಬ ಮಾತುಗಳು ಈಗ ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...