alex Certify
ಕನ್ನಡ ದುನಿಯಾ       Mobile App
       

Kannada Duniya

2 ಕಾರುಗಳಲ್ಲಿ ಬಂದಿದ್ದ ಖದೀಮರು ಮಾಡಿದ್ದೇನು..?

car-theftಎರಡು ಕಾರುಗಳಲ್ಲಿ ಬಂದಿದ್ದ ಖದೀಮರ ತಂಡವೊಂದು ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಕದ್ದೊಯ್ದ ಘಟನೆ ಮೈಸೂರಿನ ಟಿ.ಕೆ. ಬಡಾವಣೆಯಲ್ಲಿ ನಡೆದಿದೆ.

ಮುಂಜಾನೆ 4 ಗಂಟೆ ಸುಮಾರಿಗೆ ಬಂದಿದ್ದ ಈ ಕಳ್ಳರ ತಂಡ ಸಾಯಿಕುಮಾರ್ ಎಂಬವರಿಗೆ ಸೇರಿದ ಇನ್ನೋವಾ ಕಾರನ್ನು ಕದ್ದುಕೊಂಡು ಪರಾರಿಯಾಗಿದೆ. ಕಳ್ಳನೊಬ್ಬ ಇನ್ನೋವಾ ಕಾರಿನ ಗ್ಲಾಸ್ ನ್ನು ಸ್ಕೇಲ್ ಸಹಾಯದಿಂದ ಕೆಳಗಿಳಿಸಿ ಬಳಿಕ ಡೋರ್ ತೆಗೆದು ಒಳ ಪ್ರವೇಶಿಸಿದ್ದಾನೆ. ಸುಮಾರು 20 ನಿಮಿಷಗಳ ಕಾಲ ಕಾರಿನಲ್ಲಿಯೇ ಕುಳಿತಿದ್ದ ಆತ, ಬಳಿಕ ಕಾರು ಚಲಾಯಿಸಿಕೊಂಡು ತನ್ನ ಸಹಚರರ ಜೊತೆ ಪರಾರಿಯಾಗಿದ್ದಾನೆ.

ಈ ದೃಶ್ಯಗಳೆಲ್ಲವೂ ಮನೆ ಮುಂದೆ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಾರು ಕಳೆದುಕೊಂಡ ಸಾಯಿಕುಮಾರ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...