alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಮ್ಮ ಕ್ಯಾಂಟೀನ್’ ನಂತೆ JDS ನಿಂದ ‘ಅಪ್ಪ’ ಕ್ಯಾಂಟೀನ್

saravn

ಬೆಂಗಳೂರು: ತಮಿಳುನಾಡಿನಲ್ಲಿ ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಲೆಂದು ದಿ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ‘ಅಮ್ಮ ಕ್ಯಾಂಟೀನ್’ ಯೋಜನೆ ಜಾರಿಗೆ ತಂದಿದ್ದರು.

ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಕೊಡುವ ಈ ಯೋಜನೆ ಜನಪ್ರಿಯವಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲಿ ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ಸರ್ಕಾರ ಮುಂದಾಗಿದೆ.

ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿ ಆಗಸ್ಟ್ ನಲ್ಲಿ ‘ಇಂದಿರಾ ಕ್ಯಾಂಟೀನ್’ ಆರಂಭಿಸಲು ತಯಾರಿ ನಡೆದಿದೆ. ಇದಕ್ಕಿಂತ ಮೊದಲೇ ಜೆ.ಡಿ.ಎಸ್.ನಿಂದ ‘ಅಪ್ಪ ಕ್ಯಾಂಟೀನ್’ ಆರಂಭಿಸಲಾಗುತ್ತಿದೆ.

ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಅವರು ಬೆಂಗಳೂರಿನ ಎಲ್ಲಾ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ‘ಅಪ್ಪ ಕ್ಯಾಂಟೀನ್’ ಆರಂಭಿಸಲಿದ್ದಾರೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ. ದೇವೇಗೌಡರ ಹುಟ್ಟುಹಬ್ಬದ ಅಂಗವಾಗಿ ಈ ಯೋಜನೆ ರೂಪಿಸಲಾಗಿದೆ. ಪಕ್ಷದ ಹೆಸರಿನಲ್ಲೇ ಕ್ಯಾಂಟೀನ್ ನಡೆಯಲಿದೆ.

ರೈತರಿಂದಲೇ ನೇರವಾಗಿ ಧವಸ, ಧಾನ್ಯ, ತರಕಾರಿ ಖರೀದಿಸಲಿದ್ದು, 5 ರೂ ದರದಲ್ಲಿ ತಿಂಡಿ ಕೊಡಲಾಗುವುದು. ಮುಂದಿನ ತಿಂಗಳಿಂದಲೇ ‘ಅಪ್ಪ ಕ್ಯಾಂಟೀನ್’ ಆರಂಭವಾಗಲಿವೆ ಎಂದು ಶರವಣ ತಿಳಿಸಿದ್ದಾರೆ.

Jobs by neuvoo.co.in

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...