alex Certify
ಕನ್ನಡ ದುನಿಯಾ       Mobile App
       

Kannada Duniya

ಇಂದಿರಾ ಕ್ಯಾಂಟೀನ್ ನಲ್ಲಿ 105 ವರ್ಷದ ಭಿಕ್ಷುಕಿಗೆ ಸಿಕ್ಕಿದ್ದೇನು?

begger

105 ವರ್ಷದ ಶಾಕಮ್ಮ ಒಬ್ಬ ಬಿಕ್ಷುಕಿ. ಭಿಕ್ಷಾಟನೆಯಿಂದ ಬ್ರೇಕ್ ತೆಗೆದುಕೊಂಡು ಇಂದಿರಾ ಕ್ಯಾಂಟೀನ್ ನಲ್ಲಿ 10 ರೂಪಾಯಿ ಕೊಟ್ಟು ಊಟ ಮಾಡೋಣ ಅಂತಾ ಬಂದಿದ್ಲು. ಆದ್ರೆ ಮಹಾಲಕ್ಷ್ಮಿ ಲೇಔಟ್ ಇಂದಿರಾ ಕ್ಯಾಂಟೀನ್ ಓಪನ್ ಆಗಿ ಕೇವಲ 15 ನಿಮಿಷಗಳಲ್ಲಿ ಊಟ ಪೂರ್ತಿ ಖಾಲಿಯಾಗಿತ್ತು.

ವೃದ್ಧೆಯನ್ನು ನೋಡಿ ಮರುಕಪಟ್ಟ ಕ್ಯಾಂಟೀನ್ ಸಿಬ್ಬಂದಿ ಅಳಿದು ಉಳಿದಿದ್ರಲ್ಲೇ ಅಡ್ಜಸ್ಟ್ ಮಾಡಿ ಅನ್ನ ಸಾಂಬಾರ್ ಕೊಟ್ಟಿದ್ದಾರೆ. ಆದ್ರೆ ಗ್ರಾಹಕರು ಮಾತ್ರ ಸುಮ್ಮನಾಗ್ಲಿಲ್ಲ. ಮಧ್ಯಾಹ್ನ ಊಟದ ಕಲೆಕ್ಷನ್ ಎಷ್ಟಾಗಿದೆ ಅಂತಾ ಪ್ರಶ್ನಿಸತೊಡಗಿದ್ರು. ಊಟದಿಂದ ಬಂದ ಆದಾಯ ಕೇವಲ 1500 ರೂಪಾಯಿ.

500 ಜನರಿಗೆ ಊಟ ಕೊಡೋದಾಗಿ ಸರ್ಕಾರ ಹೇಳಿದೆ, ಅಂದ್ಮೇಲೆ 5000 ರೂಪಾಯಿ ಸಂಗ್ರಹವಾಗ್ಬೇಕು. ಉಳಿದ ಆಹಾರ ಎಲ್ಲಿ ಹೋಯ್ತು ಅನ್ನೋದು ಅವರ ಪ್ರಶ್ನೆ. ಸರ್ಕಾರ ಬಡವರಿಗೆ ಕಡಿಮೆ ದರದಲ್ಲಿ ಊಟ ಕೊಡೋದಾಗಿ ಹೇಳಿ ಅದರಲ್ಲೂ ಭ್ರಷ್ಟಾಚಾರ ಮಾಡ್ತಿದೆ ಅಂತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಾಕಮ್ಮ ಅನಾಥೆ. ಆಕೆಗೆ ಮನೆ ಮಕ್ಕಳು ಯಾರೂ ಇಲ್ಲ. ಫುಟ್ಪಾತ್ ನಲ್ಲಿ ಜೀವನ ಮಾಡ್ತಾಳೆ. ಇಂದಿರಾ ಕ್ಯಾಂಟೀನ್ ಬಂದಿರೋದ್ರಿಂದ ತನ್ನಂಥ ಬಡವರು ಹೊಟ್ಟೆ ತುಂಬಾ ಊಟ ಮಾಡಬಹುದು ಎಂದುಕೊಂಡಿದ್ಲು. ಆದ್ರೆ 500 ಜನರ ಬದಲು ಬರೀ 150 ಜನರಿಗೆ ಊಟ ಕೊಡ್ತಿರೋದ್ರಿಂದ ಜನರು ಕ್ಯಾಂಟೀನ್ ಮುಂದೆ ಕ್ಯೂ ನಿಲ್ಲುವಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...