alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲ್ ಗರ್ಲ್ ಜೊತೆ ಚಕ್ಕಂದ ಆಡಲು ಹೋದವನಿಗೇನಾಯ್ತು?

iphone_call

ಬೆಂಗಳೂರು: ಕಾಲ್ ಗರ್ಲ್ ಜೊತೆಗೆ ರಾತ್ರಿ ಕಳೆಯಲು ಬಂದ ಉದ್ಯಮಿಯೊಬ್ಬ ಇಂಗು ತಿಂದ ಮಂಗನಂತಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಮಿಳುನಾಡು ಮೂಲದ ಉದ್ಯಮಿ ಕೆಲಸದ ನಿಮಿತ್ತ ಏಪ್ರಿಲ್ 25ರಂದು ಬೆಂಗಳೂರಿಗೆ ಬಂದಿದ್ದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಕಾಂಗ್ರೆಸ್ ಮುಖಂಡನೊಬ್ಬನಿಗೆ ಐಷಾರಾಮಿ ಹೋಟೆಲ್ ನಲ್ಲಿ ರೂಂ ಬುಕ್ ಮಾಡಲು ಹೇಳಿದ್ದರು. ಅದರಂತೆ ರೂಂ ಬುಕ್ ಆಗಿತ್ತು. ಉದ್ಯಮಿಗೆ ರಾತ್ರಿ ರಾಣಿ ಜೊತೆಗೆ ಕಾಲಕಳೆಯುವ ಮನಸ್ಸಾಗಿದೆ. ಅದರಂತೆ, ಹೈದರಾಬಾದ್ ಮೂಲದವಳೆನ್ನಲಾದ ಕಾಲ್ ಗರ್ಲ್ ಒಬ್ಬಳನ್ನು ಕರೆಸಿಕೊಂಡಿದ್ದಾರೆ. ಆಕೆಯನ್ನು ರೂಮಿಗೆ ಕರೆದುಕೊಂಡು ಬಂದ ಉದ್ಯಮಿ, ರಾತ್ರಿಯಿಡಿ ಫುಲ್ ಜೋಶ್ ಇರಬೇಕೆಂದು ಮದ್ಯ ತರಲು ಹೊರಗೆ ಹೋಗಿದ್ದಾರೆ.

ಅವರು ಹೊರಗೆ ಹೋಗಿ ಮದ್ಯ ತರುವಷ್ಟರಲ್ಲಿ ಕಾಲ್ ಗರ್ಲ್ 3 ಲಕ್ಷ ರೂ. ನಗದು, ಚಿನ್ನಾಭರಣ, ಐಪಾಡ್ ತೆಗೆದುಕೊಂಡು ಪರಾರಿಯಾಗಿದ್ದಾಳೆ. ಇದರಿಂದ ಕಂಗಾಲಾದ ಉದ್ಯಮಿ, ಸ್ನೇಹಿತನೊಂದಿಗೆ ಹೋಗಿ ಜೀವನ್ ಭೀಮಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...