alex Certify
ಕನ್ನಡ ದುನಿಯಾ       Mobile App
       

Kannada Duniya

ಶೋ ರೂಂನಲ್ಲಿ ನಡೆದ ಘಟನೆ ಸಿಸಿ ಟಿವಿಯಲ್ಲಿ ಸೆರೆ

hero splendr

ಹೊಸ ಬೈಕ್ ಖರೀದಿಗೆ ಬಂದಿದ್ದ ಗ್ರಾಹಕರೊಬ್ಬರನ್ನು ವಂಚಿಸಿ 50 ಸಾವಿರ ರೂ. ದೋಚಿದ ಘಟನೆ ಶಿವಮೊಗ್ಗದ ದ್ವಿಚಕ್ರವಾಹನ ಶೋ ರೂಂ ಒಂದರಲ್ಲಿ ನಡೆದಿದೆ. ಶಿವಮೊಗ್ಗ ಸಮೀಪದ ಬೀರನಕೆರೆ ನಿವಾಸಿ ಮಂಜುನಾಥ್ ವಂಚನೆಗೆ ಒಳಗಾದವರು. ಫೆಬ್ರವರಿ 17 ರಂದು ಮಂಜುನಾಥ್ 50 ಸಾವಿರ ರೂ. ಹಣದೊಂದಿಗೆ ಶೋ ರೂಂ ಗೆ ಬಂದಿದ್ದರು.

ಈ ಸಂದರ್ಭದಲ್ಲಿ ಶೋ ರೂಂನಲ್ಲೇ ಇದ್ದ ವ್ಯಕ್ತಿಯೊಬ್ಬ ತನ್ನನ್ನು ಶೋರೂಂ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಏನು ಬೇಕೆಂದು ಕೇಳಿದ್ದಾನೆ. ಮಂಜುನಾಥ್ ತಮಗೆ ಬೇಕಿದ್ದ ಹೀರೋ ಸ್ಪ್ಲೆಂಡರ್ ಬೈಕ್ ಬಗ್ಗೆ ಮಾಹಿತಿ ಕೇಳಿದ್ದಾರೆ. ಆ ವ್ಯಕ್ತಿ ಇವರಿಗೆ ಶೋ ರೂಂನಲ್ಲಿದ್ದ ಎಲ್ಲಾ ಬೈಕ್ ಗಳನ್ನು ತೋರಿಸಿ, ಇದು ಇಷ್ಟು ಮೈಲೇಜ್ ಕೊಡುತ್ತದೆ ಎಂದೆಲ್ಲಾ ಬಗ್ಗೆ ಮಾಹಿತಿಯನ್ನು ನೀಡಿದ್ದಾನೆ. ಮಂಜುನಾಥ್ ಎಲ್ಲಾ ಬೈಕ್ ಗಳನ್ನು ನೋಡಿದ ನಂತರ ಸ್ಪ್ಲೆಂಡರ್ ಬೈಕ್ ಖರೀದಿಗೆ ಮನಸ್ಸು ಮಾಡಿದ್ದಾರೆ.

ಸರಿ, ಕೌಂಟರ್ ನಲ್ಲಿ ಹಣ ಕಟ್ಟಬೇಕು ಎಂದು ಹೇಳಿದ ವ್ಯಕ್ತಿ, ಮಂಜುನಾಥ್ ಅವರಿಂದ 50 ಸಾವಿರ ರೂ. ಹಣ ಪಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಮಂಜುನಾಥ್ ಸ್ವಲ್ಪ ಸಮಯ ಕಾದ ನಂತರ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಅವರು ಶಿವಮೊಗ್ಗದ ಕೋಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಘಟನೆಗಳ ದೃಶ್ಯಾವಳಿಗಳೆಲ್ಲಾ ಶೋ ರೂಂನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...