alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಯಾಣಿಕರ ಹಣ ಎಗರಿಸಿದ ಬಸ್ ಕ್ಲೀನರ್

theft

ಬಸ್ ನಲ್ಲಿ ಪ್ರಯಾಣ ಮಾಡುವಾಗ, ಕಳ್ಳರ ಹಾವಳಿ ಜಾಸ್ತಿ ಎಂಬ ಕಾರಣಕ್ಕೆ ಬಸ್ ಸಿಬ್ಬಂದಿ, ಕಳ್ಳರಿರುತ್ತಾರೆ ನಿಮ್ಮ ಲಗೇಜು, ವಸ್ತುಗಳಿಗೆ ನೀವೇ ಜವಾಬ್ದಾರರು ಎಂದು ಹೇಳುವುದನ್ನು ನೋಡಿರುತ್ತೀರಿ. ಅಲ್ಲದೇ, ಬಸ್ ನಿಲ್ದಾಣಗಳಲ್ಲೂ ಕಳ್ಳರಿದ್ದಾರೆ ಎಚ್ಚರಿಕೆ ಎಂಬ ಬೋರ್ಡ್ ಕಂಡು ಬರುತ್ತದೆ.

ಹೀಗೆ ಪ್ರಯಾಣಿಕರ ವಸ್ತು, ಲಗೇಜ್ ಸೇಫ್ ಮಾಡಬೇಕಾದ ಬಸ್ ಕ್ಲೀನರ್ ಹಣ ದೋಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಸುತ್ತಿದ್ದ, ಸಾಗರದ ಮಹಿಳೆಯೊಬ್ಬರ ಬ್ಯಾಗ್ ನಲ್ಲಿ ಇಟ್ಟಿದ್ದ 50,000 ರೂ. ದೋಚಿ ಪರಾರಿಯಾಗಿದ್ದಾನೆ. ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ನಲ್ಲಿ ಮಹಿಳೆ ಕುಳಿತಿದ್ದು, ಅವರ ಬ್ಯಾಗ್ ನಲ್ಲಿ ಹಣ ಇರುವುದನ್ನು ಗಮನಿಸಿದ ಕ್ಲೀನರ್ ಹಣ ಕಸಿದು ಅಲ್ಲಿಂದ ಓಡಿದ್ದಾನೆ ಎನ್ನಲಾಗಿದೆ.

ಸೀ ಬರ್ಡ್ ಖಾಸಗಿ ಬಸ್ ಕ್ಲೀನರ್ ಶಿವು ಹಣ ಎಗರಿಸಿ ಪರಾರಿಯಾದವ. ಸುದ್ದಿ ತಿಳಿದ ಶಿವಮೊಗ್ಗ ದೊಡ್ಡಪೇಟೆ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಬಸ್ ಅಡ್ಡಗಟ್ಟಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...