alex Certify
ಕನ್ನಡ ದುನಿಯಾ       Mobile App
       

Kannada Duniya

ಸೇತುವೆಯಿಂದ ನದಿಗೆ ಬಸ್ ಬಿದ್ದು 12 ಮಂದಿ ಸಾವು

ಕೊಲ್ಹಾಪುರ: ಸೇತುವೆಯಿಂದ ನದಿಗೆ ಬಸ್ ಬಿದ್ದು 12 ಮಂದಿ ಸಾವನ್ನಪ್ಪಿದ ಘಟನೆ ಕೊಲ್ಹಾಪುರ ಬಳಿ ನಡೆದಿದೆ. ಗಣಪತಿಪುಲೆಯಿಂದ ಪುಣೆಗೆ ತೆರಳುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದಿದೆ.

ಎತ್ತರದಿಂದ ಬಸ್ ಬಿದ್ದ ಕಾರಣ ಸಾವಿನ ಸಂಖ್ಯೆ ಏರಿಕೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಬಸ್ ನಲ್ಲಿ 18 ಮಂದಿ ಪ್ರಯಾಣಿಕರಿದ್ದರು. ತಡರಾತ್ರಿ ಪಂಚಗಂಗಾ ನದಿಯ ಶಿವಾಜಿ ಸೇತುವೆ ಮೇಲೆ ಸಾಗುವಾಗ ಬಸ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...