alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ ನಲ್ಲಿ ಪತ್ತೆಯಾಯ್ತು ಸ್ಪೋಟಕ ಸಾಮಗ್ರಿ

raich

ರಾಯಚೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಭಯೋತ್ಪಾದಕರು ದಾಳಿ ನಡೆಸಬಹುದಾದ ಸಾಧ್ಯತೆ ಇದೆ ಎಂಬ ಮಾಹಿತಿಗಳ ಬೆನ್ನಲ್ಲೇ, ಆತಂಕಕಾರಿ ಘಟನೆ ವರದಿಯಾಗಿದೆ.

ಹೈದರಾಬಾದ್ ನಿಂದ ರಾಯಚೂರಿಗೆ ಬಂದ ಸರ್ಕಾರಿ ಬಸ್ ನಲ್ಲಿ, ಸ್ಪೋಟಕ ಸಾಮಗ್ರಿ ಪತ್ತೆಯಾಗಿದೆ. ರಾಯಚೂರು ಡಿಪೋ 1 ಕ್ಕೆ ಸೇರಿದ ಈಶಾನ್ಯ ಕರ್ನಾಟಕ ಸಾರಿಗೆ ಬಸ್ ನಲ್ಲಿ ಬ್ಯಾಗ್ ನಲ್ಲಿ ಬಾಂಬ್ ತಯಾರಿಸುವ ಕಚ್ಛಾ ಸಾಮಗ್ರಿಗಳು ಪತ್ತೆಯಾಗಿವೆ.

ಖಚಿತ ಮಾಹಿತಿ ಮೇರೆಗೆ ರಾಯಚೂರು ಶಕ್ತಿ ನಗರ ಠಾಣೆ ಪೊಲೀಸರು ದಾಳಿ ಮಾಡಿದ್ದು, ಅಪರಿಚತರು ಸ್ಪೋಟಕ ಇದ್ದ ಬ್ಯಾಗ್ ಬಿಟ್ಟು ಪರಾರಿಯಾಗಿದ್ದಾರೆ. ಬ್ಯಾಗ್ ವಶಕ್ಕೆ ಪಡೆದ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...